ಭವಾನಿ ಮಾತೆ ಸ್ಮರಣೆಯಿಂದ ಸಂಕಷ್ಟ ದೂರ

Basavaling Avadhootar Pravachan- Mandaknalli (1)
Published on

ಬೀದರ್: ಭವಾನಿ ಮಾತೆಯನ್ನು ಭಕ್ತಿಯಿಂದ ಸ್ಮರಿಸುವುದರಿಂದ ಸರ್ವ ಸಂಕಷ್ಟಗಳು ದೂರವಾಗುತ್ತವೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.

ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭವಾನಿ ಮಾತೆ ನಂಬಿದ ಭಕ್ತರ ಕೈಹಿಡಿದು ಮುನ್ನಡೆಸುತ್ತಾಳೆ. ಎಲ್ಲ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ಹೇಳಿದರು.

ದುಷ್ಟರನ್ನು ಸಂಹರಿಸುವ ಹಾಗೂ ಶಿಷ್ಟರನ್ನು ಸಂರಕ್ಷಿಸುವ ಮಾತೆ ಶಕ್ತಿ ದೇವತೆ ಆಗಿದ್ದಾರೆ ಎಂದು ತಿಳಿಸಿದರು.

ಮಾನವ ಜನ್ಮ ದೊಡ್ಡದು. ಹೀಗಾಗಿ ನೀತಿವಂತರಾಗಿ ಬಾಳಬೇಕು. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಬದುಕು ಸಾಗಿಸಬೇಕು. ಪರಸ್ಪರರ ಕಷ್ಟ-ಸುಖದಲ್ಲಿ ಭಾಗಿಯಾಗಬೇಕು. ಪರೋಪಕಾರಿ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಹೆತ್ತ ತಂದೆ-ತಾಯಿಯನ್ನು ಯಾವ ಕಾರಣಕ್ಕೂ ವೃದ್ಧಾಶ್ರಮಕ್ಕೆ ಸೇರಿಸಬಾರದು. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಿ ಋಣ ತೀರಿಸಬೇಕು ಎಂದು ತಿಳಿಸಿದರು.

ಯುವಕರು ಸರಿಯಾದ ಮಾರ್ಗದಲ್ಲಿ ನಡೆಯಬೇಕು. ಗುರು-ಹಿರಿಯರನ್ನು ಗೌರವಿಸಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.

ಪ್ರಮುಖರಾದ ದತ್ತಾತ್ರೇಯ ಲಕ್ಕಾ, ಕಾಶಿನಾಥ ಗೌರಶೆಟ್ಟಿ, ರಮೇಶ ಲಕ್ಕಾ, ಚನ್ನಪ್ಪ ಗೌರಶೆಟ್ಟಿ, ಸಂತೋಷ ಗೌರಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net