ಡಾ. ಬಸವಲಿಂಗ ಪಟ್ಟದ್ದೇವರು ಕೃತಿ ಬಿಡುಗಡೆ

Pattaddevaru Book
Published on

ಬೀದರ್: ಇಲ್ಲಿಯ ಘಾಳೆ ಫಂಕ್ಷನ್ ಹಾಲ್‍ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಪುಣೆಯ ವಿಜನ್ ಟೂಲ್ಸ್ ಮತ್ತು ಟೆಕ್ನಾಲಜಿ ವತಿಯಿಂದ ನಡೆದ ಸಮಾರಂಭದಲ್ಲಿ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಅಕ್ಷರ ಪ್ರೀತಿ ಎಲ್ಲರಲ್ಲೂ ಬೆಳೆಯಬೇಕು. ಕೌಟುಂಬಿಕ ಕಾರ್ಯಕ್ರಮಗಳನ್ನು ಸಾಮಾಜಿಕ ಚಟುವಟಿಕೆಗಳೊಂದಿಗೆ ಆಚರಿಸುವ ಸಂಸ್ಕøತಿ ಹೆಚ್ಚಬೇಕು ಎಂದು ತಿಳಿಸಿದರು.

ಸಾಮಾನ್ಯವಾಗಿ ಜೀವನ ಚರಿತ್ರೆ ವ್ಯಕ್ತಿ ಜೀವನ ಆಧಾರಿತವಾಗಿರುತ್ತವೆ. ಆದರೆ, ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ಕೃತಿಯು ಅದಕ್ಕೆ ಭಿನ್ನವಾಗಿದೆ. ಸಮಕಾಲೀನ ಒಡನಾಡಿಗಳ ಅಭಿಪ್ರಾಯ ಕೇಂದ್ರಿತ ಜೀವನ ಚರಿತ್ರೆಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಬೀದರ್ ವಿಶ್ವವಿದ್ಯಾಲಯದ ಕಲಪತಿ ಡಾ. ಬಿ.ಎಸ್. ಬಿರಾದಾರ ಹೇಳಿದರು.

ಕೃತಿಯ ಕುರಿತು ಸಾಹಿತಿ ಈಶ್ವರಯ್ಯ ಕೊಡಂಬಲ್ ಮಾತನಾಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನಿಧ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಎಂಜಿನಿಯರ್ ಶಿವರಾಜ ಪಾಟೀಲ ಬಲ್ಲೂರ, ಡೈಮಂಡ್ ಕಾಲೇಜು ಪ್ರಾಚಾರ್ಯ ಗಣೇಶ ಜೋಜನೆ, ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ, ಶರಣಪ್ಪ ಬಲ್ಲೂರ, ಗಂಗಶೆಟ್ಟಿ ಪಾಟೀಲ, ಶಿವಕುಮಾರ ಕಟ್ಟೆ, ಕಾವೇರಿ ಪಾಟೀಲ ಬಲ್ಲೂರ, ಅಭಿನವ, ವಿರಾಟ ಬಲ್ಲೂರ, ಡಾ.ಭತಮುರ್ಗೆ ಚಂದ್ರಪ್ಪ, ಕಲಾವಿದ ಡಿ.ಕೆ.ಬಡಿಗೇರ್ ಇದ್ದರು. ಬಸವರಾಜ ಪಾಟೀಲ ಬಲ್ಲೂರ ಸ್ವಾಗತಿಸಿದರು. ಟಿ.ಎಂ.ಮಚ್ಚೆ, ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಶಿವಶಂಕರ ಟೋಕರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net