ಬೀದರ್ ಚೆಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ

Chess - Copy
Published on

ಬೀದರ್: ಚೆಸ್ ಆಟಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಬೀದರ್ ಚೆಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಅಸೋಸಿಯೇಷನ್ ಪದಾಧಿಕಾರಿಗಳಲ್ಲಿ ನಿತಿನ್ ಕರ್ಪೂರ (ಅಧ್ಯಕ್ಷ), ಡಾ. ಮಲ್ಲಿಕಾರ್ಜುನ ಚಟ್ನಳ್ಳಿ (ಉಪಾಧ್ಯಕ್ಷ), ಸತೀಶಕುಮಾರ ಸ್ವಾಮಿ (ಕಾರ್ಯದರ್ಶಿ), ವಿಕ್ರಮ ತಗಾರೆ (ಜಂಟಿ ಕಾರ್ಯದರ್ಶಿ), ಸಿದ್ರಾಮೇಶ್ವರ ಶೆಟಕಾರ್ (ಖಜಾಂಚಿ), ಹೈ ಐಡಿಯಲ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ (ತಾಂತ್ರಿಕ ಪಾಲುದಾರ), ನಿತಿನ್ ಗೋಯಲ್, ಪ್ರಭು ತಟಪಟ್ಟಿ, ಸುರೇಶ ಬಿರಾದಾರ, ವಿಜಯಕುಮಾರ ಗುನ್ನಳ್ಳಿ, ಗಜಾನನ ಪೋಕಲವಾರ, ಶಿವಕುಮಾರ ಗದರೆ, ಗೋಪಾಲಕೃಷ್ಣ, ಬಸವಾಂಜಲಿ ಚಟ್ನಳ್ಳಿ, ರೂಪಾಲಿ ಎನ್. ಕರ್ಪೂರ, ಅನ್ನಪೂರ್ಣ ಎಸ್. ಸ್ವಾಮಿ, ತ್ರಿಶಲಾ ಶೆಟಕಾರ್, ಶ್ರುತಿ ಪೋಕಲವಾರ, ಅನುರಾಧಾ ತಟಪಟ್ಟಿ, ಡಾ. ಶ್ರುತಿ ಬಿರಾದಾರ ಹಾಗೂ ಶಿವಾನಿ ತಗಾರೆ (ಸದಸ್ಯರು) ಸೇರಿದ್ದಾರೆ.

ನಗರದ ಇಂದಿರಾ ಮಾರ್ಕೆಟ್‍ನಲ್ಲಿ ಡಾ. ವಿ.ವಿ. ನಾಗರಾಜ ಅವರು ಡಾ. ಚಂದ್ರಕಾಂತ ಕುಲಕರ್ಣಿ ಅವರೊಂದಿಗೆ ಚೆಸ್ ಆಡುವ ಮೂಲಕ ಅಸೋಯೇಷನ್ ಅನ್ನು ಬುಧವಾರ ಉದ್ಘಾಟಿಸಿದರು.

ಅಸೋಸಿಯೇಷನ್ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಚೆಸ್ ಟೂರ್ನಿಗಳನ್ನು ಸಂಘಟಿಸಲಿದೆ. ಮಕ್ಕಳಿಗೆ ಚೆಸ್ ತರಬೇತಿ ಕೊಡಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ನಿತಿನ್ ಕರ್ಪೂರ ತಿಳಿಸಿದರು. ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net