ಸಮಾಜಕ್ಕೆ ಕೊಡುಗೆ ನೀಡಿದ್ದ ಸುಶೀಲಾಬಾಯಿ ಖಂಡ್ರೆ

Sushilabai Khandre Shruddhanjali Sabhe-2
Published on

ಬೀದರ್: ಸುಶೀಲಾಬಾಯಿ ಕಾಶಪ್ಪ ಖಂಡ್ರೆ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸ್ಮರಿಸಿದರು.

ಭಾಲ್ಕಿ ಪಟ್ಟಣದ ಸುಭಾಷ್ ಚೌಕ್ ಸಮೀಪದ ಸುಶೀಲಾಬಾಯಿ ಖಂಡ್ರೆ ಅವರ ನಿವಾಸದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಪತಿ ಕಾಶಪ್ಪ ಖಂಡ್ರೆ ಅವರಿಗೆ ಬೆನ್ನೆಲುಬು ಆಗಿದ್ದರು. ಕಿರಿಯ ವಯಸ್ಸಿನಲ್ಲೇ ಪತಿ ನಿಧನರಾದರೂ ವಿಚಲಿತರಾಗಲಿಲ್ಲ. ಕುಟುಂಬದ ಜವಾಬ್ದಾರಿಗಳನ್ನು ಧೈರ್ಯದಿಂದ ನಿಭಾಯಿಸಿದರು. ಉತ್ತಮ ಶಿಕ್ಷಣ ಕೊಟ್ಟು ಮಕ್ಕಳ ಭವಿಷ್ಯ ಉಜ್ವಲಗೊಳಿಸಿದರು ಎಂದು ತಿಳಿಸಿದರು.

ಯಾರಿಂದಲೂ ಸೇವೆ ಮಾಡಿಸಿಕೊಳ್ಳದೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸುಶೀಲಾಬಾಯಿ ಅವರ ಜೀವನ ಮಹಿಳೆಯರಿಗೆ ಆದರ್ಶವಾಗಿದೆ ಎಂದು ಹೇಳಿದರು.

ಭರತಕುಮಾರ ಖಂಡ್ರೆ, ದತ್ತು ಖಂಡ್ರೆ, ಡಾ. ಕುಶಾಲ್ ಖಂಡ್ರೆ, ಡಾ. ಯಶೋಮತಿ ಖಂಡ್ರೆ, ಡಾ. ಭವಾನಿ ಖಂಡ್ರೆ, ಡಾ. ಅಶೋಕಕುಮಾರ ನಾಗೂರೆ, ಡಾ. ದೇವಕಿ ನಾಗೂರೆ, ಡಾ. ಪೃಥ್ವಿರಾಜ್ ನಾಗೂರೆ, ಡಾ. ಪ್ರಸನ್ನರಾಜ ನಾಗೂರೆ, ಬಸಪ್ಪ ವಂಕೆ, ಓಂಕಾರ ಉಪ್ಪೆ, ದಿಗಂಬರ, ಡಾ. ಬಳತೆ, ಕಾಮಣ್ಣ, ಧರ್ಮು ವಂಕೆ, ರವಿ, ಮಿಥುನ್ ಪುರಿ, ಸಂಗಮೇಶ, ಗುಂಡೇರಾವ್ ಪಾಟೀಲ ಕಣಜಿ, ಶಿವರಾಜ ಕಡಗಂಚಿ, ಉಮೇಶ ಕಡಗಂಚಿ, ಶಿವರಾಜ ಕಡಗಂಚಿ, ರಮೇಶ ಬಿರಾದಾರ, ಮಲ್ಲಮ್ಮ ವಾಲಿ, ಶರದ್ ಘಂಟೆ, ನಾಗೇಂದ್ರ ಭಾಲ್ಕಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net