

ಬೀದರ್: ತಾಲೂಕಿನ ಜನವಾಡ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ನೆಸ್ಸೆಸ್ಕೆ) ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಗೆ ಚಾಲನೆ ನೀಡಲಾಯಿತು.
ಜಿಲ್ಲೆಯ ಪೂಜ್ಯರ ಸಾನ್ನಿಧ್ಯದಲ್ಲಿ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಪೂಜೆ ನೆರವೇರಿಸಿ ಯಂತ್ರಕ್ಕೆ ಕಬ್ಬು ಹಾಕುವ ಮುಖಾಂತರ ಕ್ರಷಿಂಗ್ಗೆ ಚಾಲನೆ ನೀಡಿ ಮಾತನಾಡಿ, ಈ ಹಂಗಾಮಿನಲ್ಲಿ ಐದು ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಎಂದಿನಂತೆ ಜಿಲ್ಲೆಯ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಸಹಕರಿಸಬೇಕೆಂದು ಮನವಿ ಮಾಡಿದರು.
ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸ್ಥಾಪಿಸಿದ ಈ ಕಾರ್ಖಾನೆ ಜಿಲ್ಲೆ ರೈತರ ಜೀವನಾಡಿಯಾಗಿದೆ. ಪ್ರಸಕ್ತ ಕಾರ್ಖಾನೆ ಸರಿಯಾಗಿ ನಡೆಸಿ ರೈತರಿಗೆ ಉತ್ತಮ ಬೆಲೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಖಾನೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶವಿದ್ದು, ನಾನಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕಾರ್ಖಾನೆಗೆ ಕಬ್ಬು ಸಾಗಿಸುವ ರೈತರಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿಸಲಾಗುವುದು. ರೈತರು ತಮ್ಮ ಕಬ್ಬನ್ನು ಬೇರೆಡೆ ಪಲ್ಲಟ ಮಾಡದೆ ಕಾರ್ಖಾನೆಗೆ ಸಾಗಿಸಿ ಸಹಕರಿಸಬೇಕು ಎಂದು ಕೋರಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಭಾತಂಬ್ರಾ, ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಶ್ರೀ ರಾಜೇಶ್ವರ ಶಿವಾಚಾರ್ಯ ಮೇಹಕರ್, ಶ್ರೀ ರುದ್ರಮಣಿ ಪಟ್ಟದ್ದೇವರು ಚಾಂಬೋಳ, ಶ್ರೀ ಅವಧೂತಗಿರಿ ಮಹಾರಾಜರು ಬರದಿಪುರ, ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ ನಾಗಮರಪಳ್ಳಿ, ಕಾರ್ಖಾನೆ ನಿರ್ದೇಶಕರಾದ ರಾಜಕುಮಾರ ಕರಂಜಿ, ಶಿವಬಸಪ್ಪ ಚೆನ್ನಮಲ್ಲೆ, ಸಿದ್ರಾಮ ವಾಗಮಾರೆ, ವಿಜಯಕುಮಾರ ಪಿ. ಪಾಟೀಲ್, ಸೀತಾರಾಮ ಖೇಮಾ, ಸಂಗಮೇಶ ಪಾಟೀಲ್, ಶೋಭಾವತಿ ಪಾಟೀಲ್, ಮಲ್ಲಮ್ಮಾ ಪಾಟೀಲ್, ವೀರಶೆಟ್ಟಿ ಪಟ್ನೆ, ನಾಗರಡ್ಡಿ ಯಾಚೆ, ವ್ಯವಸ್ಥಾಪಕ ನಿದರ್ೇಶಕ ಸೋಮಶೇಖರ ಪಾಟೀಲ್, ಕಾರ್ಖಾನೆಯ ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.