ಪಟ್ಟಾಧಿಕಾರ ಮಹೋತ್ಸವ 20, 21ಕ್ಕೆ

Murugendra Devaru
Published on

ಬೀದರ್: ತಾಲೂಕಿನ ಚಾಂಬೋಳ ಗ್ರಾಮದ ಶ್ರೀ ಗುರು ರುದ್ರಮುನಿಶ್ವರ ಸಂಸ್ಥಾನ ಹಿರೇಮಠದ ಶ್ರೀ ಮುರುಘೇಂದ್ರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ನ.20, 21ರಂದು ಆಯೋಜಿಸಲಾಗಿದೆ.

ಶ್ರೀಮದ್ ಉಜ್ಜಯಿನಿ ಜಗದ್ಗುರು ಸದ್ಧರ್ಮ ಸಿಂಹಾಸನದ ಶಾಖಾ ಮಠ ಇದಾಗಿದೆ. ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ನಡೆಯಲಿವೆ. ನ.21 ವರೆಗೆ ಹಮ್ಮಿಕೊಂಡಿರುವ ಶ್ರೀ ಶರಣಬಸವೇಶ್ವರ ಪುರಾಣಕ್ಕೆ ಗುರುವಾರ ರಾತ್ರಿ ಚಾಲನೆ ನೀಡಿದ್ದು, ನಿತ್ಯ ಸಂಜೆ 6ಕ್ಕೆ ಪುರಾಣ ನಡೆಯಲಿದೆ.

ನ.20ರಂದು ಸಂಜೆ 6.30ಕ್ಕೆ ಪುರಾಣ ಮಹಾಮಂಗಲ ಹಾಗೂ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆ ನಡೆಯಲಿದೆ. ವಿವಿಧ ಮಠದ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಶಾಸಕರು, ಗಣ್ಯರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ನ.21ರಂದು ಬೆಳಗ್ಗೆ 6ಕ್ಕೆ ಉಜ್ಜಯಿನಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನೂತನ ಶ್ರೀಗಳಿಗೆ ಹೆಸರು ಅಭಿದಾನ ಹಾಗೂ ಪಟ್ಟಾಧಿಕಾರ ಮಹೋತ್ಸವದ ವಿಧಿ ವಿಧಾನಗಳು ನಡೆಯಲಿವೆ. ಬೆಳಗ್ಗೆ 11ಕ್ಕೆ ಪೀಠಾರೋಹಣ ಇದೆ. ಮಧ್ಯಾಹ್ನ 3ಕ್ಕೆ ನೂತನ ಪೂಜ್ಯರ ಭವ್ಯ ಉತ್ಸವ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ಮುರುಘೇಂದ್ರ ದೇವರು ಮೂಲತಃ ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ದಹಿಟನೆ ಗ್ರಾಮದವರು. ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಅಧ್ಯಾತ್ಮ ವಿದ್ಯೆಗಾಗಿ ಹಾನಗಲ್ನ ಶಿವಯೋಗ ಮಂದಿರದಲ್ಲಿ ಉಳಿದರು. ಇದೀಗ ಚಾಂಬೋಳ ಮಠದ ಪಟ್ಟಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಾಧಿಕಾರ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net