ಶೌಚಗೃಹ ನಿರ್ಮಾಣ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ

images
Published on

ಬೀದರ್: ಕಮಠಾಣದಲ್ಲಿ ಶೌಚಗೃಹ ನಿರ್ಮಾಣ ಸಂಬಂಧ ನಡೆದ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದೆ. ಮಹ್ಮದ್ ಯುನೂಸ್ ಹನ್ನುಮಿಯಾ ಬುಡುವಾಲೆ (47) ಕೊಲೆಯಾದವ. ಸರ್ಕಾರಿ ಕೊಳವೆಬಾವಿ ಪಕ್ಕ ಉಮರ್ ಜಮಾದಾರ ಶೌಚಗೃಹ ನಿರ್ಮಿಸುತ್ತಿದ್ದು, ಇದಕ್ಕೆ ತಡೆ ನೀಡಬೇಕೆಂದು ಯುನೂಸ್ ಗ್ರಾಪಂಗೆ ದೂರು ನೀಡಿದ್ದರು. ದೂರು ಸಂಬಂಧ ಉಮರ್ ಇತರರು ಸೇರಿ ತಂದೆಗೆ ಹೊಡೆದು ಸಾಯಿಸಿದ್ದಾರೆ ಎಂದು ಮೃತ ಯುನೂಸ್ ಪುತ್ರ ಮಹ್ಮದ್ ಆರೀಫ್ ದೂರಿನನ್ವಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net