ಕ್ರಿಕೆಟ್ ಆಯ್ಕೆ ಪ್ರಕ್ರಿಯೆ 10ರಂದು

images
Published on

ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ವತಿಯಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ನ.10ರಂದು ಬೆಳಗ್ಗೆ 8ಕ್ಕೆ ನಗರದ ನೆಹರು ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ದಿನಾಂಕ 01.09.2010ರ ನಂತರ ಜನಿಸಿರಬೇಕು. ಜನ್ಮ ದಿನದ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣಪತ್ರ ಮತ್ತು ಆಧಾರ್ ಕಾಡ್೯ ಅನ್ನು ಆಯ್ಕೆ ವೇಳೆ ಸಲ್ಲಿಸಬೇಕು. ಕ್ರಿಕೆಟ್ ಡ್ರೆಸ್ಕೋಡ್ (ಬಿಳಿ ಬಣ್ಣದ್ದು) ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಅನೀಲಕುಮಾರ ದೇಶಮುಖ (9341111136), ಯುವರಾಜ ಉನ್ನೆ (9886760223) ಹಾಗೂ ವಿಕ್ಕಿ ಅತವಾಲ್ (7411150137) ಅವರನ್ನು ಸಂಪರ್ಕಿಸಬೇಕು ಎಂದು ರಾಯಚೂರು ವಲಯದ ಬೀದರ್ ಜಿಲ್ಲೆಯ ಸಂಯೋಜಕ ಕುಶಾಲ ಪಾಟೀಲ್ ಗಾದಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net