ಭವಾನಿ ಮಾತೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ 8ಕ್ಕೆ

Rajshekhar Swamy
Published on

ಬೀದರ್: ಇಲ್ಲಿನ ಚಿದ್ರಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶ್ರೀ ಭವಾನಿ ಮಾತಾ ಮಂದಿರದಲ್ಲಿ ನ.8ರಂದು ಬೆಳಗ್ಗೆ 9.45ಕ್ಕೆ ಭವಾನಿ ಮಾತೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಆಯೋಜಿಸಲಾಗಿದೆ.

ಬೇಮಳಖೇಡ್-ಗೋರ್ಟಾ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಬುಧವಾರ ಬೆಳಗ್ಗೆ ಬುತ್ತಿ ಬಸವಣ್ಣ ದೇವಸ್ಥಾನದಿಂದ ಭವಾನಿ ಮಾತೆ ಮೂರ್ತಿ ಭವ್ಯ ಮೆರವಣಿಗೆ, ನ.7ರಂದು ಧಾನ್ಯ ದಿವಸ್, 8ರಂದು ಬೆಳಗ್ಗೆ 9.45ಕ್ಕೆ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣೆ ಇದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆಯಬೇಕು ಎಂದು ದೇವಸ್ಥಾನ ಕಮಿಟಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net