

ಬೀದರ್: ಪ್ರತಿಭೆ ಗುರುತಿಸಲು ಕ್ರೀಡಾಕೂಟಗಳು ಸಹಕಾರಿ ಜತೆಗೆ ವಿದ್ಯಾರ್ಥಿಗಳ ನಡುವೆ ಸಹೋದರ ಸಂಬಂಧ ಬೆಳೆಸಲು ಪೂರಕವಾಗಿವೆ ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಹೇಳಿದರು.
ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 18ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟಕ್ಕೆ ನಗರ ಹೊರವಲಯದ ವಿವಿ ಮೈದಾನದಲ್ಲಿ ಚಾಲನೆ ನೀಡಿದ ಅವರು, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಮನಾಗಿ ಪರಿಗಣಿಸಿ ಕ್ರೀಡಾ ಸೂತ್ರ್ಫಿ ತೊರಬೇಕು ಎಂದರು.
ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಜಿ. ಯಲಗೊಡ್, ಕ್ರಿಕೆಟ್ ಆಟಗಾರ್ತಿ ಸಾಕ್ಷಿ ಡೊಯಿಜೋಡೆ, ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಡಾ.ಪ್ರಶಾಂತಕುಮಾರ ವಾಘೆ ಮಾತನಾಡಿದರು. ಪಶುವೈದ್ಯಕೀಯ ಕಾಲೇಜಿನ ಡೀನ್ ಡಾ.ಎಂ.ಕೆ. ತಾಂದಳೆ ಅಧ್ಯಕ್ಷತೆ ವಹಿಸಿದ್ದರು.
ವಿವಿ ಅಕಾರಿಗಳಾದ ಡಾ.ಶ್ರೀಕಾಂತ ಕುಲಕರ್ಣಿ, ಡಾ.ದಿಲೀಪಕುಮಾರ ಡಿ., ಡಾ.ಬಸವರಾಜ ಅವಟಿ, ಡಾ.ಎಂ.ಡಿ. ಸೂರಣಗಿ, ರಾಮಪ್ಪ ಎಚ್., ಡಾ.ಪ್ರಕಾಶ ಎನ್., ಡಾ.ಮಂಜುನಾಥ ಪಾಟೀಲ್ ಇತರರಿದ್ದರು. ಡಾ.ಚನ್ನಪ್ಪಗೌಡ ಬಿರದಾದಾರ್ ಸ್ವಾಗತಿಸಿದರು. ಡಾ.ಕೊಟ್ರೇಶ ಪ್ರಸಾದ್, ಡಾ.ಶಿವಾನಿ ಮಾಮನೆ ನಿರೂಪಣೆ ಮಾಡಿದರು. ಡಾ.ಪ್ರವೀಣ ಎಂ.ಕೆ. ವಂದಿಸಿದರು.
ಮೊದಲ ದಿನದಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಚೆಸ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕ್ರಿಕೆಟ್ ಸ್ಪರ್ಧೆಗಳು ನಡೆದವು. ನ.9 ರವರೆಗೆ ಕ್ರೀಡಾಕೂಟ ನಡೆಯಲಿದೆ.