ಹಾರಕೂಡೆಗೆ ಸುವರ್ಣ ಮಹೋತ್ಸವ ಪ್ರಶಸ್ತಿ

Chandrakala harkude
Published on

ಬೀದರ್: ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಿನ್ನೆಲೆಯಲ್ಲಿ ಹಿರಿಯ ಕಲಾವಿದೆ ಚಂದ್ರಕಲಾ ಹಾರಕೂಡೆ ಅವರನ್ನು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೂಲತಃ ಹುಲಸೂರು ಪಟ್ಟಣದ ನಿವಾಸಿಯಾದ ಹಾರಕೂಡೆ ಸದ್ಯ ಮೂರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅಕ್ಷರ ಜ್ಞಾನ ಇಲ್ಲದಿದ್ದರೂ ಜ್ಞಾಪಕ ಶಕ್ತಿಯಿಂದಲೇ ಸಾವಿರಾರು ಜಾನಪದ ಗೀತೆಗಳ ಗಾಯನ ಮಾಡುವುದು ಇವರ ವಿಶೇಷ. ಗ್ರಾಮೀಣ ಭಾಗದಲ್ಲಿ ನಡೆಯುವ ಉತ್ಸವ, ಹಬ್ಬ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಹಾರಕೂಡೆ ಅವರ ಗಾಯನ ಇರುತ್ತದೆ.

ಈಚೆಗೆ ಆಧುನಿಕತೆ ಭರಾಟೆಗೆ ಕೌದಿ ಸಿಕ್ಕು ಹೇಳಹೆಸರಿಲ್ಲದಂತಾಗಿದೆ. ಆದರೆ ಗಾಯನ ಜತೆ ಕೌದಿ ಹೊಲೆಯುವಲ್ಲಿ ಚಂದ್ರಕಲಾ ಪರಿಣತರು. ಚಿತ್ರಗಳನ್ನು ಬಿಡಿಸಿ ಕೌದಿ ಹೊಲಿಯುವ ಜತೆಗೆ ತರಬೇತಿ ಸಹ ನೀಡುತ್ತಿದ್ದಾರೆ. ನಾಡಗೌಡ ಕೆಂಪೇಗೌಡ, ರಾಜ್ಯೋತ್ಸವ ಸೇರಿ ನಾನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net