ಕರಡು ಮತದಾರ ಪಟ್ಟಿ ಆಕ್ಷೇಪಣೆಗೆ ಅವಕಾಶ

dc shilpa sharma
Published on

ಬೀದರ್: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025 ನಿಮಿತ್ತ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಕರಡು ಮತದಾರರ ಪಟ್ಟಿ ತಯಾರಿಸಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದರೆ ನ.28ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದ್ದಾರೆ.

ಕರಡು ಪಟ್ಟಿಯನ್ನು ಜಿಲ್ಲೆಯ ಎಲ್ಲ ಮತಗಟ್ಟೆ ಕೇಂದ್ರ, ತಹಸಿಲ್ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಜಿಲ್ಲಾ ಚುನಾವಣಾಕಾರಿ ಕಚೇರಿ ಹಾಗೂ ನಿಗದಿತ ಸ್ಥಳಗಳ ಸೂಚನಾ ಫಲಕಕ್ಕೆ ಅಂಟಿಸಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರದ ಪಟ್ಟಿಯ ಒಂದು ಪ್ರತಿಯನ್ನು ಅನುಮೋದಿತ ರಾಜಕೀಯ ಪಕ್ಷದವರಿಗೆ ನೀಡಲಾಗಿದೆ. ಆಕ್ಷೇಪಣೆ ಇದ್ದಲ್ಲಿ ನ.28ರೊಳಗೆ ಸಂಬಂಧಿಸಿದ ತಹಸೀಲ್ದಾರ್ ಕಚೇರಿಯಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಅಂಕಿ ಅಂಶ: ಬಸವಕಲ್ಯಾಣ ಕ್ಷೇತ್ರದಲ್ಲಿ 1,31,853 ಪುರುಷರು, 1,23,660 ಮಹಿಳೆಯರು ಸೇರಿ 2,55,513. ಹುಮನಾಬಾದ್ ನಲ್ಲಿ 1,32,370 ಪುರುಷರು, 1,26,969 ಮಹಿಳೆಯರು ಸೇರಿ 2,59,339. ಬೀದರ್ ದಕ್ಷಿಣದಲ್ಲಿ 1,10,275 ಪುರುಷರು, 1,05,012 ಮಹಿಳೆ ಸೇರಿ 2,15,287. ಬೀದರ್ನಲ್ಲಿ 1,23,529 ಪುರುಷರು, 1,22,468 ಮಹಿಳೆ ಸೇರಿ 2,45,997. ಭಾಲ್ಕಿಯಲ್ಲಿ 1,24,075 ಪುರುಷರು, 1,16,066 ಮಹಿಳೆ ಸೇರಿ 2,40,141. ಔರಾದ್ ಕ್ಷೇತ್ರದಲ್ಲಿ 1,17,539 ಪುರುಷರು, 1,09,881 ಮಹಿಳೆ ಸೇರಿ 2,27,420. ಜಿಲ್ಲೆಯಲ್ಲಿ 7,39,641 ಪುರುಷರು, 7,04,056 ಮಹಿಳೆ ಸೇರಿ 14,43,697 ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net