ಆನ್‌ಲೈನ್ ಗೇಮ್ ನಿಷೇಧಿಸಲು ಹೋರಾಟ

Bhalki Sene
Published on

ಭಾಲ್ಕಿ: ಯುವಕರ ಮೇಲೆ ಪರಿಣಾಮ ಬೀರುತ್ತಿರುವ ಜೂಜು, ಬೆಟ್ಟಿಂಗ್ನಂಥ ಆನ್‌ಲೈನ್ ಗೇಮ್ ನಿಷೇಧಿಸಲು ಹೋರಾಟ ರೂಪಿಸಲಾಗುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಜ್ಯಾಂತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸೇನೆ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನ್‌ಲೈನ್ ಗೇಮ್ ಯುವಕರಿಗೆ ಚಟವಾಗಿ ಮಾರ್ಪಟ್ಟಿದೆ. ಇದರಿಂದ ಯುವಕರು ಹಣ ಕಳೆದುಕೊಳ್ಳುವ ಜತೆಗೆ ಪ್ರಾಣಕ್ಕೂ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಬಿರಾದಾರ್, ಸುದೀಪ ತೂಗಾಂವೆ ಇತರರಿದ್ದರು.

ಪದಾಧಿಕಾರಿಗಳು: ನಮ್ಮ ಕರ್ನಾಟಕ ಸೇನೆ ಭಾಲ್ಕಿ ತಾಲೂಕು ಘಟಕಕ್ಕೆ ಶ್ರೀನಿವಾಸ ಮೇತ್ರೆ (ಗೌರವಾಧ್ಯಕ್ಷರು), ಬಸವರಾಜ ಕಾರಬಾರಿ (ಅಧ್ಯಕ್ಷ), ವೀರೇಶ ಬಿರಾದಾರ್, ರಾಜು ಕುಂಬಾರ, ಜಗದೀಶ ಪಾಟೀಲ್, ಮಹೇಶ ರಾಚೋಟೆ, ಜಗದೀಶ ಹೂಗಾರ (ಉಪಾಧ್ಯಕ್ಷರು), ಭದ್ರಯ್ಯ ಸ್ವಾಮಿ (ಪ್ರಧಾನ ಕಾರ್ಯದರ್ಶಿ), ಲೋಕೇಶ ಚಿಂಚೋಳೆ, ಸಂಗಮೇಶ ಮಾಳಗೆ, ಶ್ರೀಶೈಲ ಕರಂಜೆ, ಸುಧಾಕರ ಪ್ರೇಮಾ, ಆನಂದ ಸಾಗರ, ಸಾಗರ ಸ್ವಾಮಿ (ಸಂಘಟನಾ ಕಾರ್ಯದರ್ಶಿಗಳು), ದೀಪಕ ಠಮಕೆ (ಮಾಧ್ಯಮ ಪ್ರತಿನಿಧಿ), ಕಾಶೀನಾಥ ಚಳಕಾಪುರೆ (ಯುವ ಘಟಕ ಅಧ್ಯಕ್ಷ), ದತ್ತಾತ್ರಿ ಜಗತಾಪ (ನಗರ ಘಟಕ ಅಧ್ಯಕ್ಷ), ರಾಜಕುಮಾರ ರಾಠೋಡ್, ಬಾಲಾಜಿ ಮೇಗೆ, ಪಂಢರಿನಾಥ ಪಾಂಚಾಳ, ರಾಹುಲ್ ಬಿರಾದಾರ್, ರಾಹುಲ್ ಪಾಟೀಲ್, ಏಕನಾಥ ಮೇತ್ರೆ, ಅನೀಲ ಚವ್ಹಾಣ್, ಅಮರ ಹೊನ್ನಾಳೆ (ಸದಸ್ಯರು) ಪದಗ್ರಹಣ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net