

ಬೀದರ್: ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹಣ್ಮು ಪಾಜಿ ಗೆಳೆಯರ ಬಳಗದಿಂದ ಕೊಡಲಾಗುವ ಪ್ರಸಕ್ತ ವರ್ಷದ ರಾಜ್ಯಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 69 ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದವರು: ವೈದ್ಯಕೀಯ ಕ್ಷೇತ್ರ: ಡಾ. ಮಹೇಶ್ವರಿ ಸಜ್ಜನಶೆಟ್ಟಿ, ಡಾ. ಶರಣಯ್ಯ ಸ್ವಾಮಿ, ಡಾ. ಮಹೇಶ ಚನಶೆಟ್ಟಿ, ಡಾ. ಖಾಜಾ ಮೈನೊದ್ದಿನ್, ಡಾ. ವಿನಯಕುಮಾರ್ ಬಿಯಾನಿ, ಡಾ. ಶ್ರೀನಿವಾಸ್ ಬಿರಾದಾರ.
ಪೊಲೀಸ್ ಕ್ಷೇತ್ರ: ಮಲ್ಲಿಕಾರ್ಜುನ ಯಾತನೂರ, ಸುವರ್ಣಾ, ಅಶೋಕ ಪಾಟೀಲ, ನಂದಕುಮಾರ, ಅಬ್ದುಲ್ ಜಬ್ಬಾರ್.
ಕಾನೂನು ಕ್ಷೇತ್ರ: ಅಮರನಾಥ ಪಾಟೀಲ, ಪರಮೇಶ ಬಂಬುಳಗೆ, ಕೇಶವರಾವ್ ಶ್ರೀಮಾಳೆ, ಗುಣಶೇಖರ ಪಾಟೀಲ, ಪ್ರೇಮಸಾಗರ ಭಂಡೆ.
ಮಾಧ್ಯಮ ಕ್ಷೇತ್ರ: ನಾಗಶೆಟ್ಟಿ ಧರಂಪುರ, ಮಲ್ಲಿಕಾರ್ಜುನ ಮರಕಲೆ, ರಾಜೇಶ ಮುಗಟೆ, ಸಂತೋಷಕುಮಾರ ಬಿ.ಜಿ. ಪಾಟೀಲ, ಪ್ರವೀಣ್ ಪೂಜಾರಿ.
ಶಿಕ್ಷಣ ಕ್ಷೇತ್ರ: ಸಂತೋಷಕುಮಾರ ಪೂಜಾರಿ, ಬೀನಾ ಕವಳೆ, ಮಹಮ್ಮದ್ ರಫಿ ತಾಳಿಕೋಟೆ, ನಾಗನಾಥ ಬಿರಾದಾರ, ದೇವಿದಾಸ ಜೋಶಿ, ಅಮಿತ್ ಸೋಲಪುರೆ, ಶಿವಾನಂದ ಸ್ವಾಮಿ, ಸುನೀಲಕುಮಾರ ಸಿಂಗಾರೆ, ಸಂತೋಷ ಮಂಗಳೂರೆ, ಸತೀಶ್ ಬಿ. ಪರ್ತಾಪುರೆ, ಶರಣಬಸಪ್ಪ ಲಂಗೋಟಿ.
ಸಾಹಿತ್ಯ ಕ್ಷೇತ್ರ: ಸುನೀತಾ ವಿಠ್ಠಲರಾವ್, ಜಗದೇವಿ ತಿಬಶೆಟ್ಟೆ, ರವಿದಾಸ ಕಾಂಬಳೆ, ಸಂಗಮೇಶ ಮುರ್ಕೆ, ಶ್ರೇಯಾ ಯಶಪಾಲ್, ಶೋಭಾವತಿ ಚೆಕ್ಕಿ, ಜಗನ್ನಾಥ ಮೂಲಗೆ, ಸಂಗಮೇಶ್ವರ ಜ್ಯಾಂತೆ, ಸಿದ್ದಮ್ಮ ಸಂಗ್ರಾಮ, ಓಂಕಾರ ಪಾಟೀಲ, ಆಶಾ ಲಕ್ಕಶೆಟ್ಟಿ, ರಕ್ಷಿತಾ ದಾಮಾ, ಸಾಗರ್ ವಗ್ಗಿ.
ಕಲಾ ಕ್ಷೇತ್ರ: ರಾಣಿ ಸತ್ಯಮೂರ್ತಿ, ಪೂರ್ಣಚಂದ್ರ, ಸಿದ್ದಪ್ಪ ಬಿ. ಕಾಶೆಂಪುರ, ನಾಗರಾಜ ಜೋಗಿ, ಶೇಕ್ ರಶೀದ್ ಸಾಬ, ಸುಷ್ಮಾ ರಾಜೇಂದ್ರಕುಮಾರ.
ಸಾಮಾಜಿಕ ಕ್ಷೇತ್ರ: ಶರಣಬಸಪ್ಪ ಸಾವಳೆ, ಗುರು ಬಂಡಿ, ಖಾಜಾ ಖಲೀಲ್ ಉಲ್ಲಾ, ಬೊಮ್ಮಗೊಂಡ ಚಿಟ್ಟಾವಾಡಿ, ಗಿರೀಶ್ ಬಿರಾದಾರ, ಶ್ರೀಧರ ನಾಗನಹಳ್ಳಿ, ಸಂತೋಷ ಜೋಳದಾಪಕೆ, ಸಂಗಮೇಶ ಸಂಚಾರಿ, ಸುರೇಶ ಹಿಪ್ಪಳಗಾಂವ್, ಲೋಕೇಶ್ ಮರ್ಜಾಪುರ, ಯುವರಾಜ ಐಹೊಳೆ, ಮನೋಜಕುಮಾರ ಸಿತಾಳೆ, ಮಲ್ಲಿನಾಥ ಭರ್ಡಿ, ಲೋಕೇಶ ದಾಸೋಳೆ, ವೀರೇಶ ರೆಡ್ಡಿ, ಸಂಗಮೇಶ ಬಿರಾದಾರ, ಸಂತರಾಮ ಕುಂಚೆ, ಸಾಯಿನಾಥ, ಪವನ್ ಗೊಂಡ, ಧನರಾಜ ರೆಡ್ಡಿ, ಅವಿನಾಶ, ಎಂ.ಡಿ. ಮಿಷ್ಬಾ.
ಬೀದರ್‍ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನವೆಂಬರ್ 5 ರಂದು ಹಮ್ಮಿಕೊಳ್ಳಲಾದ 50 ರ ಕರ್ನಾಟಕ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.