

ಬೀದರ್: ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ (ಜಿಲ್ಲಾಡಳಿತ ಭವನ) ನಿರ್ಮಾಣ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಸೇನೆ ಪ್ರಮುಖರು, ಒಂದು ದಶಕದಲ್ಲಿ ಮೂರು ಪಕ್ಷ ಆಡಳಿತ ನಡೆಸಿದರೂ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ ನೀಡಿಲ್ಲ. ಶೀಘ್ರವೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಂದ್ ಮಾಡಿದ್ದರಿಂದ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಕೂಡಲೇ ಕಾರ್ಖಾನೆ ಆರಂಭಕ್ಕೆ ಕ್ರಮ ವಹಿಸಬೇಕು. ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತರು ಎರಡು ವರ್ಷಗಳಿಂದ ಅಹೋರಾತ್ರಿ ಹೋರಾಟ ಮಾಡುತ್ತಿದ್ದು, ನ್ಯಾಯಸಮ್ಮತ ಬೇಡಿಕೆ ಈಡೇರಿಸಬೇಕು. ಸ್ಥಗಿತಗೊಂಡಿರುವ ನಾಗರಿಕ ವಿಮಾನಯಾನ ಆರಂಭಿಸಬೇಕು ಎಂದು ಆಗ್ರಹಿಸಿದರು.
ಸೇನೆ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್, ಉಪಾಧ್ಯಕ್ಷ ಎಂ.ಡಿ. ಮಸ್ತಾನ್ ಮುಲ್ಲಾ, ಕಾರ್ಯಾಧ್ಯಕ್ಷ ತುಕಾರಾಮ ರಾಗಾಪುರೆ, ಸಂಗಮೇಶ ಏಣಕೂರ, ಶಿವರಾಜ ನೇಳವಾಳಕರ್, ನವೀಲ ಅಲ್ಲಾಪುರ, ಸುಂದರ ಬಕಚೌಡಿ, ಕಮಲಹಾಸನ ಭಾವಿದೊಡ್ಡಿ, ಅಂಬಾದಾಸ ಬೇಲೂರೆ, ಸಂಜುಕುಮಾರ ಗೋರನಳ್ಳಿ, ಸೂರ್ಯಕಾಂತ ಬಲ್ಲೂರ, ಜೇಮ್ಸ್, ವಿಕ್ಕಿ ಚಿಟ್ಟಾ, ಸ್ವಾಮಿದಾಸ ನಿದ್ದೆ, ವೆಂಕಟೇಶ್ವರ ಚಿದ್ರಿ, ಶ್ರೀನಾಥ ಚಿದ್ರಿ, ಅನೀಲ ಸಿಂಧೆ, ಅನೀಲ ಸಾಂಗವಿ, ರಿಚಡ್೯ ಹಮೀಲಾಪುರ, ಸುಶೀಲ ಕೆಂಪೆನೋರ್, ಯೇಷಪ್ಪ ಶೆಂಬೆಳ್ಳಿ, ವೆಂಕಟೇಶ ಪಾಟೀಲ್, ದಾವೀದ್ ಏಕಲಾರ, ಸುರೇಶ ದೊಡ್ಡಿ ಇದ್ದರು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.