ಬಿಜೆಪಿ ಸದಸ್ಯತ್ವ ಪಡೆದು ಮೋದಿ ಕೈಬಲಪಡಿಸಿ

bjp
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಬೀದರ್: ಜಗತ್ತಿನಲ್ಲಿ ಬಲಿಷ್ಠ ಆರ್ಥಿಕತೆಯ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಬೇಕು ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್ ಕರೆ ನೀಡಿದರು.

ಬೀದರ್ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿದ ಅವರು, ವಿಶ್ವದ ಬಹುದೊಡ್ಡ ಈ ಪಕ್ಷಕ್ಕೆ ದೇಶದ ಅಭಿವೃದ್ಧಿಯೇ ಪ್ರಮುಖ ಉದ್ದೇಶ. ಅಭಿಯಾನ ಯಶಸ್ವಿಗೊಳಿಸುವ ಮೂಲಕ ಮೋದಿ ಕೆಲಸಗಳಿಗೆ ಶಕ್ತಿ ತುಂಬಬೇಕು ಎಂದರು.

ಪಕ್ಷವನ್ನು ಬೂತ್ ಮಟ್ಟದಿಂದ ಶಕ್ತಿಶಾಲಿಯನ್ನಾಗಿ ಮಾಡಲು ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲ ಮುಖಂಡರು, ಕಾರ್ಯಕರ್ತರು ಪಕ್ಷದ ಕಾರ್ಯವನ್ನು ದೇಶದ ಒಳಿತಿಗಾಗಿ ಮಾಡುವ ಸೇವೆ ಎಂದು ಭಾವಿಸಿ ಕೆಲಸ ಮಾಡಬೇಕು. ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ನಿಷ್ಠೆಯಿಂದ ದುಡಿಯಬೇಕು. ಪ್ರತಿ ಮನೆಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ಮತ್ತು ದೇಶದ ರಕ್ಷಣೆ ಮಾಡುವ ಉತ್ತಮ ಪಕ್ಷ. ಇಂಥ ಪಾಟರ್ಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೆಂದು ಭಾವಿಸಿ ಮುನ್ನಡೆಯಬೇಕು. ಸರಿಯಾಗಿ ಕೆಲಸ ಮಾಡುವವರ ಸಹಕಾರಕ್ಕೆ ನಾನು ಸದಾ ಸಿದ್ಧ. ಎಲ್ಲರೂ ಚುರುಕಾಗಿ ಕೆಲಸ ಮಾಡಬೇಕು ಎಂದರು.

ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತ ಕನಿಷ್ಠ 50 ಸದಸ್ಯರನ್ನು ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಕ್ರಮ ಜರುಗಿಸಲಾಗುವುದು. ಇದಕ್ಕೆ ಅವಕಾಶ ಕೊಡಬಾರದು ಎಂದು ಕೋರಿದರು.

ಬಿಜೆಪಿಯನ್ನು ಬಲಪಡಿಸಲು, ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ವಿಸ್ತರಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ್, ಮಾಧವ ಹಾಸುರೆ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದೀಪಕ ಗಾದಗೆ, ಪ್ರಮುಖರಾದ ವಿಜಯಕುಮಾರ ಪಾಟೀಲ್ ಗಾದಗಿ, ರಾಜಶೇಖರ ನಾಗಮೂರ್ತಿ, ಗುರುನಾಥ ರಾಜಗೀರಾ, ರಾಜಕುಮಾರ ಚಿದ್ರಿ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಲುಂಬಿಣಿ ಗೌತಮ, ಮಹಾನಂದ ಪಾಟೀಲ್, ರಾಜಕುಮಾರ ಚಿದ್ರಿ, ರಾಮಶೆಟ್ಟಿ ಪನ್ನಾಳೆ, ಸುಭಾಷ ಮಡಿವಾಳ, ರಾಜಕುಮಾರ ನೆಮತಾಬಾದೆ, ಸುನೀಲ ಗೌಳಿ, ಗಣೇಶ ಭೋಸ್ಲೆ, ಪ್ರಕಾಶ ಖಿಂಡಿ, ನಾಗೇಂದ್ರ ಪಾಟೀಲ್ ಇತರರಿದ್ದರು. ಅಭಿಯಾನದಲ್ಲಿ ಅಕ ಸದಸ್ಯರನ್ನು ನೋಂದಾಯಿಸಿದ ಸಂಜುಕುಮಾರ ಪಾಟೀಲ್, ನಿತೀನ್ ಕರ್ಪೂರ್, ವೀರು ದಿಗ್ವಾಲ್ ಇತರರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net