

ಹುಲಸೂರು: ಕೈಗೆ ಹಚ್ಚಿಕೊಂಡಿದ್ದ ಮೆಹಂದಿಯನ್ನು ಸ್ವಚ್ಛ ಮಾಡಿಕೊಳ್ಳುವಾಗ ತೊಟ್ಟಿಯಲ್ಲಿ (ಹೌದು) ಬಿದ್ದು ಐದು ವರ್ಷದ ಬಾಲಕಿ ಸಾವಿಗೀಡಾದ ಘಟನೆ ಬುಧವಾರ ಸಂಜೆ ನಡೆದಿದೆ.
ಪಟ್ಟಣದ ಶ್ರೀನಿಧಿ ವಿಜಯಕುಮಾರ ವಟಗೆ (5) ಮೃತ ಬಾಲಕಿ. ಕೈಗೆ ಮೆಹೆಂದಿ ಹಚ್ಚಿಕೊಂಡು ಮಕ್ಕಳೊಂದಿಗೆ ಆಟ ಆಡುತ್ತಾ ಪಕ್ಕದ ಮನೆಯ ಆವರಣದಲ್ಲಿದ ತೊಟ್ಟಿಯಲ್ಲಿನ ನೀರು ಕಂಡು ಕೈ ತೊಳೆದುಕೊಳ್ಳಲು ಮುಂದಾಗಿದ್ದಾಳೆ. ತೊಟ್ಟಿಯಲ್ಲಿ ಬಾಗಿದ್ದಾಗ ಒಳಗೆ ಬಿದ್ದು ಮೃತಪಟ್ಟಿದ್ದಾಳೆ.