

ಬೀದರ್: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಎಚ್.ನರಸಿಂಹಯ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪರಿಷತ್ ರಾಜ್ಯ ಸಂಚಾಲಕ ದಾನಿ ಬಾಬುರಾವ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವವರು ಪರಿಷತ್ ಪದಾಧಿಕಾರಿಗಳಾಗಿರಬಾರದು, 50 ವರ್ಷ ಮೇಲ್ಪಟ್ಟಿರಬೇಕು. ವೈಜ್ಞಾನಿಕ, ಶಿಕ್ಷಣ, ಸಾಹಿತ್ಯ, ಸಂಗೀತ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರಬೇಕು. ಭಾವಚಿತ್ರ, ಮೊಬೈಲ್ ಫೋನ್ ಸಂಖ್ಯೆ, ವಿಳಾಸ, ವಯಕ್ತಿಕ ಸಾಧನೆ ಒಳಗೊಂಡಿರುವ ಅರ್ಜಿಯನ್ನು ಅ. 25ರೊಳಗೆ ಕಳುಹಿಸಬೇಕು. ಮಾಹಿತಿಗಾಗಿ 9448568360, 9845605148 ಸಂಖ್ಯೆಗೆ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಿಂದ ವೈಜ್ಞಾನಿಕ ಕ್ಷೇತ್ರದ ಸಾಧಕರೊಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಹಿಂದೆ ಜಿಲ್ಲೆಯಿಂದ ಎಂ.ಎಸ್.ಮನೋಹರ (ವೈಜ್ಞಾನಿಕ ಚಟುವಟಿಕೆ), ಸುಭಾಷ ನೇಳಗೆ (ವಿಜ್ಞಾನ), ಪ್ರೊ.ಶಿವಕುಮಾರ ಕಟ್ಟೆ (ಸಾಹಿತ್ಯ ಮತ್ತು ಶಿಕ್ಷಣ) ಅವರಿಗೆ ಪ್ರಶಸ್ತಿ ನೀಡಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.