ಸಕ್ರಿಯ ಸದಸ್ಯತ್ವ ಅಭಿಯಾನ ಚುರುಕುಗೊಳಿಸಿ

aurad bjp
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಔರಾದ್: ಬಿಜೆಪಿಯ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಆದ್ಯತೆ ನೀಡಬೇಕು. ಪಕ್ಷದ ಪ್ರತಿಯೊಬ್ಬರೂ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ಸಕ್ರಿಯ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಕನಿಷ್ಠ 50 ಸದಸ್ಯರನ್ನು ಪಕ್ಷಕ್ಕೆ ಸೇರಿಸಿದವರಿಗೆ ಸಕ್ರಿಯ ಕಾರ್ಯಕರ್ತರಾಗಲು ಸಾಧ್ಯವಿದೆ. ಇಂಥವರಿಗೆ ಮುಂದಿನ ದಿನಗಳಲ್ಲಿ ಪಕ್ಷ ನಾಮನಿರ್ದೇಶನ ಮತ್ತಿತರ ಜವಾಬ್ದಾರಿ ನೀಡಲಿದೆ. ಹೀಗಾಗಿ ಗಂಭೀರ ಪರಿಗಣಿಸಿ ಸಕ್ರಿಯ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ ಔರಾದ್ ಕ್ಷೇತ್ರ ರಾಜ್ಯದ ಅಗ್ರ ಸ್ಥಾನದಲ್ಲಿರುವಂತೆ ಮಾಡಿ ಎಂದು ಕರೆ ನೀಡಿದರು.

ಅಭಿಯಾನದಲ್ಲಿ ಔರಾದ್ ಕ್ಷೇತ್ರಕ್ಕೆ 1.20 ಲಕ್ಷ ಗುರಿ ನೀಡಲಾಗಿತ್ತು. ಈವರೆಗೆ 95 ಸಾವಿರ ಸದಸ್ಯರ ಸೇರ್ಪಡೆ ಮಾಡಲಾಗಿದೆ. ಇನ್ನೊಂದು ಒಂದು ವಾರವಿದ್ದು, ಅಲ್ಲಿಯವರೆಗೆ ಗುರಿ ಸಾಸಲಾಗುವುದು ಎಂದರು.

ಪಕ್ಷ ನನಗೆ ತಾಯಿ, ಕಾರ್ಯಕರ್ತರು ಕುಟುಂಬ ಸದಸ್ಯರಿದ್ದಂತೆ. ಅವರನ್ನು ಸದಾ ಗೌರವಿಸುತ್ತ ಬಂದಿದ್ದೇನೆ. ಎಲ್ಲರ ಸಹಕಾರದಿಂದಲೇ ಪಕ್ಷದ ಎಲ್ಲ ಕಾರ್ಯಚಟುವಟಿಕೆ ಸರಿಯಾಗಿ ನಡೆಯುತ್ತಿವೆ. ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಎಂದೂ ಮರೆಯಲು ಸಾಧ್ಯವಿಲ್ಲ. ಯಾವುದೇ ಕೆಲಸವಿರಲಿ, ಉತ್ಸಾಹ ಮತ್ತು ಶ್ರದ್ಧೆಯಿಂದ ಮಾಡುತ್ತಾರೆ ಎಂದು ಕೊಂಡಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ನಿಷ್ಠೆ ಮತ್ತು ಪರಿಶ್ರಮದಿಂದಾಗಿ ಪಕ್ಷದ ಕಾರ್ಯಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಸಕ್ರಿಯ ಸದಸ್ಯತ್ವ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ್, ಪೀರಪ್ಪ ಔರಾದೆ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿದರು.

ಮಾಜಿ ಶಾಸಕ ಗುಂಡಪ್ಪ ಬಿರಾದಾರ್, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ವೈಜಿನಾಥ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ಕೃಷ್ಣ ನರೋಟೆ, ಪ್ರಮುಖರಾದ ವಸಂತ ಬಿರಾದಾರ್, ಮಹಾದೇವ ಹುಸುರೆ, ಮಹೇಶ್ವರ ಸ್ವಾಮಿ, ಶಿವರಾಜ ಅಲ್ಮಾಜೆ, ವಿಜಯಲಕ್ಷ್ಮೀ ಕೌಟಗೆ, ಝಾಕೀರ್ ಶೇಖ್, ನೀಲೇಶ ರಕ್ಷಾಳ, ಬಸವರಾಜ ಪಾಟೀಲ್, ಖಾಜಾಮಿಯಾ ಶೇಖ್, ಖಂಡೋಬಾ ಕಂಗಟೆ ಇತರರಿದ್ದರು. ಶಾಸಕರು ಎಲ್ಲ ಕಾರ್ಯಕರ್ತರಿಗೆ ಶಾಲು ಹೊದಿಸಿ ಪುಷ್ಪವೃಷ್ಟಿ ಮಾಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net