ಮನೆ-ಮನೆಗೆ ಸಂವಿಧಾನ ಸಮಾವೇಶ 26ಕ್ಕೆ

poster
Published on

ಬೀದರ್: ಮನೆ-ಮನೆಗೆ ಸಂವಿಧಾನ ಜಾಗೃತಿ ಹಾಗೂ ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಅಭಿನಂದನಾ ಸಮಾವೇಶವನ್ನು ಅ.26ರಂದು ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಹಿರಿಯ ಮುಖಂಡ ಅನೀಲಕುಮಾರ ಬೆಲ್ದಾರ್ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿದ ಅವರು, ಶೋಷಿತ ಸಮುದಾಯಗಳ ಒಕ್ಕೂಟ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಸಂಘಟಿಸಿದ ಸಮಾವೇಶದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಪ್ರಮುಖರಾದ ರಮೇಶ ಡಾಕುಳಗಿ, ಬಸವರಾಜ ಮಾಳಗೆ, ಅಬ್ದುಲ್ ಮನ್ನಾನ್ ಸೇಠ್, ರಾಜಕುಮಾರ ಬನ್ನೇರ್, ಬಾಬುರಾವ ಪಾಸ್ವಾನ್, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಶಾಲಿವಾನ ಬಡಿಗೇರ, ರಮೇಶ ಕಟ್ಟಿತೂಗಾಂವ, ಶಾಮರಾವ ನೇಳವಾಳ, ರಾಜಕುಮಾರ ಗಾದಗಿ, ಪ್ರದೀಪ ನಾಟೇಕರ್, ಸೋಮನಾಥ ಪಾಟೀಲ್ ಚಿಮಕೋಡ, ರಮೇಶ ಮಂದಕನಳ್ಳಿ, ಅಹ್ಮದ್ ಅಲಿಯಾಬಾದ್, ಸಾಯಿ ಸಿಂಧೆ, ದಶರಥ ಹೊಸಮನಿ, ಗೌತಮ ಬೋಸ್ಲೆ, ಮಲ್ಲಿಕಾರ್ಜುನ ಮೊಳಕೇರೆ, ಸುರೇಶ ಜೋಜನಾಕರ್, ಶಶಿಧರ ಬಾಸಂತ, ವಿನೋದ ಬಂದಗೆ, ಸಚಿನ್ ಲಕ್ಕಿ, ಶ್ರೀನಿವಾಸ ಭೀಮನಗರ, ಸಂದೀಪ ಕಾಂಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net