ಪದವಿಪೂರ್ವ ಕಾಲೇಜು ನೌಕರರ ಸಭೆ 20 ರಂದು

Published on

ಬೀದರ್: ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಸಭೆ ತುಮಕೂರಿನ ಸರ್ವೋದಯ ಕಾಲೇಜು ಸಮೀಪದ ರವೀಂದ್ರ ಕಲಾ ನಿಕೇತನದಲ್ಲಿ ಅಕ್ಟೋಬರ್ 20 ರಂದು ಬೆಳಿಗ್ಗೆ 11ಕ್ಕೆ ಜರುಗಲಿದೆ.
ಸಭೆಯಲ್ಲಿ ಸಂಘದ ರಾಜ್ಯ ಸಮಾವೇಶ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವ ದಿಸೆಯಲ್ಲಿ ಅನುದಾನಿತ ನೌಕರರ ಸಮಸ್ಯೆಗಳ ಕುರಿತ ವಿಸ್ತøತ ಚರ್ಚೆ ನಡೆಯಲಿದೆ ಎಂದು ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಬಿ. ಹೆಗ್ಗೆ ತಿಳಿಸಿದ್ದಾರೆ.
ಜಿಲ್ಲೆಯ ಸಂಘದ ಸದಸ್ಯರು ಹಾಗೂ ನೌಕರರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net