ನವ ಭಾರತ ಜನ ಸೇವಾ ಫೌಂಡೇಷನ್ ಅಸ್ತಿತ್ವಕ್ಕೆ

Nav Bharat Jan seva Foundation - Copy
Published on

ಬೀದರ್: ನಗರದಲ್ಲಿ ನವ ಭಾರತ ಜನ ಸೇವಾ ಫೌಂಡೇಷನ್ ಅಸ್ತಿತ್ವಕ್ಕೆ ಬಂದಿದೆ.
ಫೌಂಡೇಷನ್ ಅಧ್ಯಕ್ಷರಾಗಿ ಡಾ. ಸಂತೋಷಕುಮಾರ ಅಪ್ಪಣ್ಣನವರ್, ಉಪಾಧ್ಯಕ್ಷರಾಗಿ ಫಾತಿಮಾ, ಕಾರ್ಯದರ್ಶಿಯಾಗಿ ಸಂತೋಷಕುಮಾರ ಲದ್ದೆ, ಸಹ ಕಾರ್ಯದರ್ಶಿಯಾಗಿ ರಾಮರಾವ್ ಪವಾರ್, ಖಜಾಂಚಿಯಾಗಿ ತಾನಾಜಿ ಸುಭಾಷರಾವ್, ಸದಸ್ಯರಾಗಿ ಸಂದೀಪ್ ಮಚ್ಚೇಂದ್ರ, ಸೌಮ್ಯ ಅಪ್ಪಣ್ಣ, ಕವಿತಾ ಪವಾರ್, ಯೋಗಿನಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ಫೌಂಡೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಂತೋಷಕುಮಾರ ಅಪ್ಪಣ್ಣನವರ್ ಅವರು, ಫೌಂಡೇಷನ್ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ವಿವಿಧ ಜನ ಪರ ಕಾರ್ಯಗಳನ್ನು ಕೈಗೊಳ್ಳುವ ಯೋಜನೆ ಹೊಂದಿದೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಜಾಗೃತಿ, ಉಚಿತ ಆರೋಗ್ಯ ತಪಾಸಣೆ ಶಿಬಿರ, ನೀಟ್, ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ, ವೃದ್ಧಾಶ್ರಮ ಸ್ಥಾಪನೆ ಮೊದಲಾದವು ಫೌಂಡೇಷನ್ ಉದ್ದೇಶಗಳಲ್ಲಿ ಸೇರಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net