ಅಭಿನಂದನಾ ಸಮಾರಂಭ 20ರಂದು

DSS Meeting
Published on

ಬೀದರ್: ಸಂಸದ ಸಾಗರ್ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯರ ಅಭಿನಂದನಾ ಸಮಾರಂಭ ಅ.20ರಂದು ನಗರದ ನೆಹರು ಕ್ರೀಡಾಂಗಣ ಹತ್ತಿರದ ಸಾಯಿ ಸ್ಕೂಲ್ ಆವರಣದಲ್ಲಿ ಆಯೋಜಿಸಲು ಬುಧವಾರ ನಡೆದ ಶೋಷಿತ ಸಮುದಾಯಗಳ ಒಕ್ಕೂಟ, ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಮುಖಂಡ ಶಂಕರ ಮಾವಳ್ಳಿ ಇತರರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಹಿರಿಯ ಮುಖಂಡ ಅನೀಲಕುಮಾರ ಬೆಲ್ದಾರ್ ಹೇಳಿದರು.
ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡ, ಪ್ರಮುಖರಾದ ಬಸವರಾಜ ಮಾಳೆಗೆ, ರಮೇಶ ಡಾಕುಳಗಿ, ಅಬ್ದುಲ್ ಮನ್ನಾನ್ ಸೇಠ, ಜಾನ್ ವೆಸ್ಲಿ, ಗೋವರ್ಧನ ರಾಠೋಡ್, ಡಾ.ಕಾಮಶೆಟ್ಟಿ, ರಮೇಶ ಕಟ್ಟಿತೂಗಾಂವ, ರಾಜಕುಮಾರ ಬನ್ನಿ, ಬಾಬುರಾವ ಪಾಸ್ವಾನ್, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ತುಕಾರಾಮ ಕರಾಟೆ, ರಮೇಶ ಪಾಸ್ವಾನ್, ಶಿವಾಜಿ ರಾಠೋಡ್, ಶಾಲಿವಾನ್ ಬಡಿಗೇರ, ಮಲ್ಲಿಕಾರ್ಜುನ ಪರಿಹಾರ, ಪ್ರದೀಪ ನಾಟೇಕರ್, ವಿನೋದ ಬದಿಗೆ, ಸತೀಶ ಲಕ್ಕಿ, ಅಂಬೇಡ್ಕರ್ ಸಾಗರ್, ನರಸಿಂಗ್ ಸಾಮ್ರಾಟ, ಮಲ್ಲಿಕಾರ್ಜುನ ಮೊಳಕೇರೆ, ಪ್ರಸನ್ನ ಡಾಂಗೆ, ದಿಲೀಪ ವರ್ಮಾ, ರಮೇಶ ಮಂದಕನಳ್ಳಿ, ಸಂದೀಪ ಕಾಂಟೆ, ಝರೆಪ್ಪ ರಾಂಪುರೆ, ಶಶಿಧರ ಭಾಸನ್, ಬಾಬುರಾವ ಮಿಠಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net