

ಬೀದರ್: ಸಮಾಜವನ್ನು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಮಾಜ ಸುಧಾರಣೆಯಂಥ ಕೃತಿಗಳನ್ನು ಹೆಚ್ಚೆಚ್ಚು ಹೊರಬರಲಿ ಎಂದು ಸಾಹಿತಿ ಬಕ್ಕಪ್ಪ ದಂಡಿನ್ ಹೇಳಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದಲ್ಲಿ ಏರ್ಪಡಿಸಿದ್ದ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿದ ಅವರು, ಸಮಾಜದ ಕಟ್ಟಕಡೆಯ ಜನಾಂಗದವರ ಪರವಾಗಿ ಸಾಹಿತ್ಯದ ಮೂಲಕ ದನಿಯಾಗುವವರು ಮಾತ್ರ ನೈಜ ಕವಿಗಳು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀಕುಮಾರ ಅತಿವಾಳೆ ಮಾತನಾಡಿ, ಜಿಲ್ಲೆಯ ಇಬ್ಬರು ಉದಯೋನ್ಮುಖ ಕವಿಗಳಾದ ರಾಜು ಹಾಗೂ ಅಜಯ ಸಂಗಣ್ಣೋರ್ ಕೃತಿಗಳನ್ನು ಸಂಸ್ಥೆಯಿಂದ ಲೋಕಾರ್ಪಣೆಗೊಳಿಸಿದ್ದು ಸಂತಸ ತಂದಿದೆ. ಎಲೆಮೆರೆ ಕಾಯಿಯಂತಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆತರುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕನ್ಯಾಕುಮಾರಿ ಮೂಲಗೆ, ಡಾ.ರಾಮಚಂದ್ರ ಗಣಾಪುರ, ಗಂಧರ್ವ ಸೇನಾ, ಸಂತೋಷ ಮಣಗೇರೆ, ಸುನೀತಾ ಪಾಟೀಲ್, ಚಿತ್ರಸೇನ್ ಫುಲೆ ಮಾತನಾಡಿದರು. ಸಾಹಿತಿಗಳಾದ ಶುಂಭುಲಿಂಗ ವಾಲ್ದೊಡ್ಡಿ, ಶಿವಕುಮಾರ ನಾಗವಾರ, ಕುಪೇಂದ್ರ ಶಾಸ್ತ್ರಿ, ಗಗನ್ ಫುಲೆ, ಬಾಲಾಜಿ ಕುಂಬಾರ ಇತರರಿದ್ದರು. ಅಜೀತ್ ನೇಳಗಿ ಸ್ವಾಗತಿಸಿದರು. ದಿಲೀಪಕುಮಾರ ಮೋಘಾ ನಿರೂಪಣೆ ಮಾಡಿದರು. ಅವಿನಾಶ ಸೋನೆ ವಂದಿಸಿದರು.
ಕವಿಗೋಷ್ಠಿಯಲ್ಲಿ ಚೇತನಕುಮಾರ ಖೇಳಗಿಕರ್, ಶ್ರುತಿ ಎಸ್.ಶೇರಿಕಾರ, ಅವಿನಾಶ ಸೋನೆ, ರವಿದಾಸ ಕಾಂಬ್ಳೆ, ವಿಜಯಲಕ್ಷ್ಮೀ ಗೌತಮಕರ್, ಅನೀಲ್ ಎಸ್.ಐನಾಕರ್, ಅಶ್ವಜೀತ್ ದಂಡಿನ್, ಕುನಾಲ್ ಡಿ.ಐನಾಕರ್, ಅಭಯ ಬಿದ್ರೆ, ಎಚ್.ಬಿ. ಪ್ರಿಯಂಕಾ ಕವನ ವಾಚನ ಮಾಡಿದರು. ಅಜಯ ಪಿ.ಸಂಗಣ್ಣೋರ್ ರಚಿತ ಮೊಗ್ಗು (ಕವನ ಸಂಕಲನ) ಹಾಗೂ ರಾಜು ಮಾರುತಿ ಪವಾರ್ ರಚನೆಯ ವಸಂತದೂತ (ಮಕ್ಕಳ ಗೀತ ನಾಟಕ) ಕೃತಿಗಳ ಬಿಡುಗಡೆ ಮಾಡಲಾಯಿತು.