ಐಟಿಐ ಆವರಣದಲ್ಲಿ ಸ್ವಚ್ಛತಾ ಅಭಿಯಾನ

Karnataka ITI Swatchata Abhiyan-1
Published on

ಬೀದರ್: ಸ್ವಚ್ಛತೆಯೇ ಸೇವೆ ಅಭಿಯಾನ ಅಂಗವಾಗಿ ನೆಹರೂ ಯುವ ಕೇಂದ್ರ ಹಾಗೂ ರೈಸಿಂಗ್ ಹ್ಯಾಂಡ್ಸ್ ಯುಥ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಕರ್ನಾಟಕ ಐಟಿಐನಲ್ಲಿ ಈಚೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಸಂಸ್ಥೆಯ ಪ್ರತಿನಿಧಿಗಳು, ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಕಾಲೇಜು ಆವರಣ ಶುಚಿಗೊಳಿಸಿದರು.
ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅವಶ್ಯಕ ಎಂದು ರೈಸಿಂಗ್ ಹ್ಯಾಂಡ್ಸ್ ಯುಥ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸತೀಶ್ ಬೆಳಕೋಟೆ ಹೇಳಿದರು.
ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಪ್ರಮಾಣ ವಚನ ಬೋಧಿಸಲಾಯಿತು. ಪ್ರಾಚಾರ್ಯ ವಿಜಯಕುಮಾರ ಪಾಟೀಲ, ಪ್ರಮುಖರಾದ ವೀರೇಶ ಪಾಟೀಲ, ರವಿ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net