

ಬೀದರ್: ತಾಲ್ಲೂಕಿನ ಹೊಕ್ರಾಣ(ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಯಾಸಿರ್ ಅರಾಫತ್ ಅವರಿಗೆ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪರಿಷತ್ತಿನ ರಾಜ್ಯ ಗೌರವಾಧ್ಯಕ್ಷ ಗುರು ತಿಗಡಿ, ಅಧ್ಯಕ್ಷ ಸಂಗಮೇಶ ಖನ್ನಿ ನಾಯ್ಕರ್, ಮಹಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಿರೇಗೌಡರ, ಬೀದರ್ ಜಿಲ್ಲೆಯ ಶಿವರಾಜ ಕಪಲಾಪುರೆ, ಪಾಂಡುರಂಗ ಬೆಲ್ದಾರ್ ಮತ್ತಿತರರು ಇದ್ದರು.