ಶಿಕ್ಷಕರ ಪರಿಷತ್ ಅಧ್ಯಕ್ಷರಾಗಿ ಬೆಲ್ದಾರ್

pandurang Beldar - Copy
Published on

ಬೀದರ್: ಕರ್ನಾಟಕ ಶಿಕ್ಷಕರ ಪರಿಷತ್ತಿನ ಬೀದರ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಪಾಂಡುರಂಗ ಬೆಲ್ದಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸವದತ್ತಿಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಪರಿಷತ್ತಿನ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಅವರನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.
ಪರಿಷತ್ತಿನ ರಾಜ್ಯ ಅಧ್ಯಕ್ಷ ಸಂಗಮೇಶ ಖನ್ನಿನಾಯ್ಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಘಟ್ಟಿ, ಶಿವರಾಜ ಕಪಲಾಪುರೆ, ಸುರೇಶ ಎ.ಜೆ ಅಲಾಸ್, ರಾಜಕುಮಾರ ಮಟಗೆ, ಯಾಶೀರ್ ಅರಾಫತ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net