ಧರ್ಮ ಜಾಗೃತಿ ಕಾರ್ಯ ನಡೆಯಲಿ

Kashi Jagdguru Sanman - Copy
Published on

ಬೀದರ್: ಧರ್ಮ ಜಾಗೃತಿ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು ಹೇಳಿದರು.
ನಗರದ ನೌಬಾದ್‍ನ ಜ್ಞಾನ ಶಿವಯೋಗಾಶ್ರಮದಲ್ಲಿ ಶುಕ್ರವಾರ ಸಂಜೆ ಭಕ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಧರ್ಮ ರಕ್ಷಿಸಿದವರನ್ನು ಧರ್ಮವೇ ರಕ್ಷಿಸುತ್ತದೆ ಎಂದು ತಿಳಿಸಿದರು.
ಶಿವಯ್ಯ ಸ್ವಾಮಿ ಅವರು ಅಭಿಯಾನ ಹಮ್ಮಿಕೊಂಡು ಜಿಲ್ಲೆ, ರಾಜ್ಯ, ದೇಶ, ವಿದೇಶದ ಜನಪ್ರತಿನಿಧಿಗಳು, ರಾಯಭಾರಿಗಳು, ಗಣ್ಯರಿಗೆ ಸಿದ್ಧಾಂತ ಶಿಖಾಮಣಿ ಗ್ರಂಥ ಅರ್ಪಿಸಿ ಧರ್ಮ ಜಾಗೃತಿ ಮೂಡಿಸಿರುವುದು ಪ್ರಶಂಸನೀಯ ಎಂದರು.
ಡಾ. ರಾಜಶೇಖರ ಶಿವಾಚಾರ್ಯರು ಶಿವ ದರ್ಶನ ಸಂಚಾರ ಪ್ರವಚನದ ಮೂಲಕ ಸಿದ್ಧಾಂಥ ಶಿಖಾಮಣಿಯ ಸಾರವನ್ನು ರಾಜ್ಯ, ನೆರೆ ರಾಜ್ಯಗಳ ಎಲ್ಲೆಡೆ ತಲುಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೀದರ್‍ನಲ್ಲಿ ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ, ಶಿವ ದರ್ಶನ ಸಂಚಾರ ಸಮಾರೋಪ ಹಾಗೂ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿಸಿ, ದಕ್ಷಿಣ ಭಾರತದ ಭಕ್ತರ ಸಮಾಗಮಕ್ಕೆ ವೇದಿಕೆ ಕಲ್ಪಿಸಿದ್ದು ಮಾದರಿ ಕಾರ್ಯ ಎಂದು ಬಣ್ಣಿಸಿದರು. ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಪೂಜ್ಯರು ಹಾಗೂ ಸ್ವಾಗತ ಸಮಿತಿಯ ಪ್ರಮುಖರನ್ನು ಸನ್ಮಾನಿಸಿದರು.
ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ, ನೌಬಾದ್‍ನ ಜ್ಞಾನ ಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯ, ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ, ಡಾ. ಸುಭಾಷ್ ಪಾಟೀಲ, ಗುಣವಂತರಾವ್ ಶಿಂಧೆ, ಕಂಟೆಪ್ಪ ಭಂಗೂರೆ, ವರದಯ್ಯ ಸ್ವಾಮಿ, ಬಾಪುರಾವ್ ದೇಶಮುಖ, ಮಹೇಶ ಪಾಟೀಲ, ಮಹಾಂತೇಶ ಬಿರಾದಾರ, ಪ್ರವೀಣ ಸ್ವಾಮಿ, ಮಹಾದಪ್ಪ ಭಂಗೂರೆ, ಸರಸ್ವತಿ ಗೌಡಶೆಟ್ಟಿ, ಶಿವಶಂಕರ ಬೆಳಮಗಿ, ಸತೀಶ್, ಶಿವಕುಮಾರ ಪಾಟೀಲ ತೇಗಂಪುರ, ಪ್ರಭು ಮೆಳಕುಂದೆ, ಪ್ರಶಾಂತ ಲದ್ದೆ, ಮಹಾದೇವ ತರನಳ್ಳಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net