ವಿವಿಧೆಡೆ ದಸರಾ ದರ್ಬಾರ್ ಕಾರ್ಯಕ್ರಮ

Pressmeet
Published on

ಬೀದರ್: ನವರಾತ್ರಿ ಉತ್ಸವ ನಿಮಿತ್ತ ಸಾರೆಗಮಪ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ನಿಂದ ಅ.7ರಿಂದ 11ರವರೆಗೆ ಜಿಲ್ಲೆಯ ವಿವಿಧೆಡೆ ದಸರಾ ದರ್ಬಾರ್ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸುವುದಾಗಿ ಟ್ರಸ್ಟ್ ಅಧ್ಯಕ್ಷ ಮುಖ್ಯಸ್ಥ ಮಹೇಶಕುಮಾರ ಕುಂಬಾರ ತಿಳಿಸಿದರು.
ಹಲವು ವರ್ಷಗಳಿಂದ ನಗರ ಸೇರಿ ಜಿಲ್ಲೆಯ ನಾನಾ ಕಡೆ ನಡೆಯುವ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೋರಿದರು.
7ರಂದು ಸಂಜೆ 6ಕ್ಕೆ ನಗರದ ಚಿದ್ರಿ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ, 8ರಂದು ಸಂಜೆ 6ಕ್ಕೆ ಶಿವಾಜಿನಗರ ಗೆಳೆಯರ ಹನುಮಾನ ಮಂದಿರ, 9ರಂದು ಬಸವಕಲ್ಯಾಣದ ಹಿಂಗುಲಾಂಬಿಕಾ ಮಾತಾ ದೇವಸ್ಥಾನ, 10ರಂದು ಸಂಜೆ 6ಕ್ಕೆ ಬೀದರ್ ಭೀಮನಗರದ ಜೈ ಜಗದಂಬಾ ಭವಾನಿ ಮಾತಾ ಮಂದಿರ, 11ರಂದು ಸಂಜೆ 6ಕ್ಕೆ ದೇವಿ ಕಾಲನಿ ಭವಾನಿ ದೇವಾಲಯದಲ್ಲಿ ಕಾರ್ಯಕ್ರಮ ಜರುಗಲಿದೆ. ಕಲಾವಿದರಾದ ದೊಂಡಿರಾಮ ಧುರ್ವೆ, ಬಲರಾಮ ಪಾಂಚಾಳೆ, ಜೆಸ್ಲಿ ಸೋನವಾನೆ, ಪ್ರಿಯಾ ಗುರುದೇವ, ಮಹೇಶ್ವರಿ ಪಾಂಚಾಳ ಇತರರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ, ಪ್ರಸ್ತುತ ಸಂಸ್ಕೃತಿ ಅಳಿವಿನ ಅಂಚಿನಲ್ಲಿದ್ದು, ಇಂಥ ದೇಸಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸನಾತನ ಸಂಸ್ಕೃತಿ ಎತ್ತಿ ಹಿಡಿಯುವ ಅಗತ್ಯವಿದೆ ಎಂದರು.
ಗುದಗೆ ಆಸ್ಪತ್ರೆ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಸೋಲಪುರ ಮಾತನಾಡಿದರು. ಅಕ್ಷಯ, ಗೋರಖನಾಥ ಕುಂಬಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net