ಮಾತಾ ಜಗದಂಬಾ ದೇವಿ ವಿಶೇಷ ಪೂಜೆ

chavan
Published on

ಕಮಲನಗರ: ನವರಾತ್ರಿ ಉತ್ಸವದ ಮೊದಲನೇ ದಿನವಾದ ಗುರುವಾರ ತಾಲೂಕಿನ ಬೊಂತಿ ತಾಂಡಾದಲ್ಲಿ ಶಾಸಕ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಇಚ್ಛಾಪೂತರ್ಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನೊಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು.
ಗ್ರಾಮದ ಮಾತಾ ಜಗದಂಬಾ ದೇವಿ, ಸಂತ ಸೇವಾಲಾಲ್ ಮಹಾರಾಜರು ಮತ್ತು ರಾಮರಾವ ಮಹಾರಾಜರ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಚವ್ಹಾಣ್ ವಿಶೇಷ ಪೂಜೆ, ಅರ್ಚನೆ, ಅಭಿಷೇಕ ಸೇರಿ ನಾನಾ ಧಾಮರ್ಿಕ ಕಾರ್ಯಗಳನ್ನು ಮಾಡಿದರು.
ಕುಲದೇವತೆಯಾಗಿರುವ ಇಚ್ಛಾಪೂತರ್ಿ ಮಾತಾ ಜಗದಂಬಾ ದೇವಿಯ ಶಕ್ತಿ ಅಪಾರವಾಗಿದೆ. ದೇವರ ಮೊರೆ ಹೋಗುವ ಭಕ್ತರ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ. ಬದುಕು ಸುಂದರವಾಗುತ್ತದೆ. ಮಾತೆಯ ಕೃಪೆ ಮತ್ತು ಮಹಾ ಜನತೆಯ ಆಶೀವರ್ಾದದಿಂದಾಗಿ ಉತ್ತಮವಾಗಿ ಜನಸೇವೆ ಮಾಡುತ್ತಿದ್ದೇನೆ ಎಂದು ಚವ್ಹಾಣ್ ಹೇಳಿದರು.
ಪ್ರತಿ ವರ್ಷ ತಾಂಡಾದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಗೆ ವಿಶೇಷ ಪೂಜೆ ನೆರವೇರಿಸಿ ಕ್ಷೇತ್ರದ ಜನತೆಗೆ ಒಳಿತಾಗಲೆಂದು ಮತ್ತು ರೈತರು, ಕಾಮರ್ಿಕರು ಸೇರಿದಂತೆ ಎಲ್ಲರ ಜೀವನ ಸುಖಮಯವಾಗಲೆಂದು ಪ್ರಾಥರ್ಿಸುತ್ತೇನೆ ಎಂದು ಹೇಳಿದರು.
ಪ್ರತೀಕ್ ಚವ್ಹಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net