

ಬೀದರ್: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಎಲ್ಲ ಹುದ್ದೆಗಳನ್ನು ಗೆಜೆಟೆಡ್ ಗ್ರೂಪ್ ಬಿ ದಜರ್ೆಗೆ ಉನ್ನತೀಕರಿಸಲು ಒತ್ತಾಯಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತೀಕರಣ ಸಂಘದಿಂದ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾಕರ್್ನಲ್ಲಿ ಅನಿದರ್ಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯ ಜವಾಬ್ದಾರಿ ಹಾಗೂ ಕೆಲಸದ ಹೊರಗೆ ಅನುಗುಣವಾಗಿ ಹುದ್ದೆ ಬಿ ದಜರ್ೆಗೆ ಉನ್ನತೀಕರಿಸಿಲ್ಲ. ಹೀಗಾಗಿ ಹುದ್ದೆಯನ್ನು ಉನ್ನತೀಕರಿಸಿ, ಪಿಡಿಒಗಳ ಸೇವೆಯನ್ನು ಗೌರವಿಸಬೇಕು ಎಂದು ಸಂಘದ ಪ್ರಮುಖ ಬೇಡಿಕೆಯಾಗಿದೆ ಎಂದು ಸಂಘದ ವಿಭಾಗೀಯ ಕಾರ್ಯದಶರ್ಿ ಉಮೇಶ ಕೆ.ಜಾಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.