

ಹುಮನಾಬಾದ್: ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಅಡಿ 2024-25ರಲ್ಲಿ ಹುಮನಾಬಾದ್ ವಿಧಾನಸಭೆ ಕ್ಷೇತ್ರಕ್ಕೆ 2969 ಮನೆ ಮಂಜೂರಾಗಿವೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ತಿಳಿಸಿದ್ದಾರೆ.
ದೇಶದ ಪ್ರತಿಯೊಬ್ಬ ಬಡವರಿಗೆ ಸೂರು ಒದಗಿಸಿ ವಸತಿಸಹಿತ ನೆಮ್ಮದಿ ಜೀವನ ನಡೆಸಬೇಕೆಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಯೋಜನೆ ಜಾರಿಗೆ ತಂದಿದ್ದಾರೆ. ಗ್ರಾಮೀಣ ಜನರು ಮಧ್ಯವತರ್ಿಗಳ ಆಮಿಷಕ್ಕೆ ಒಳಗಾಗಬಾರದು. ನೋಂದಾಯಿತ ಪಟ್ಟಿಯಲ್ಲಿನ ಅರ್ಹರಿಗೆ ಮನೆ ಸಿಗಲಿದೆ ಎಂದು ಹೇಳಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಹುಮನಾಬಾದ್ ತಾಲೂಕಿಗೆ 1851, ಬಸವಕಲ್ಯಾಣಕ್ಕೆ 565 ಹಾಗೂ ಚಿಟಗುಪ್ಪ ತಾಲೂಕಿಗೆ 553 ಸೇರಿ 2969 ಮನೆ ಮಂಜೂರಾಗಿವೆ. ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಆಯಾ ಗ್ರಾಪಂ ಕಚೇರಿಯಲ್ಲಿ ಲಭ್ಯವಿದ್ದು, ಸಂಬಂತ ದಾಖಲೆಗಳನ್ನು ಗ್ರಾಪಂಗೆ ಸಲ್ಲಿಸಿ ವಸತಿ ಸೌಕರ್ಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.
ಗ್ರಾಮೀಣ ಭಾಗದಲ್ಲಿ ಯಾರೊಬ್ಬರೂ ವಸತಿರಹಿತ ಇರಬಾರದು ಎಂಬ ಕೇಂದ್ರ ಸಕರ್ಾರ ಯೋಜನೆ ಹಾಕಿಕೊಂಡಿದೆ. ಪಿಎಂಎವೈ ಯೋಜನೆಯಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿ ಮನೆ ನಿಮರ್ಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೂ ಮಧ್ಯವತರ್ಿಗಳ ಹಿಂದೆ ಬಿದ್ದು ಹಣ ಕೊಡಬಾರದು. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮನೆ ಹಂಚಿಕೆ ಪಾರದರ್ಶಕವಾಗಿದ್ದು, ಯಾವೊಬ್ಬ ಫಲಾನುಭವಿ ಸಹ ಮಧ್ಯವತರ್ಿಗಳಿಗೆ ನಯಾಪೈಸೆ ನೀಡಕೂಡದು. ಈ ವಿಷಯದಲ್ಲಿ ಗ್ರಾಮಗಳಲ್ಲಿ ಡಂಗೂರ ಬಾರಿಸಿ ಜಾಗೃತಿ ಮೂಡಿಸಲು ಸಹ ಪಿಡಿಒಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.