ಗುರಿ ತಲುಪಲು ಬೇಕು ಗುರು

teachers award
Published on

ಬೀದರ್: ಗುರಿ ಮುಟ್ಟಲು ಗುರುವಿನ ಆಶೀರ್ವಾದ ಬೇಕು. ಹೀಗಾಗಿ ಗುರುವಿನ ಸ್ಥಾನ ಅತ್ಯಂತ ಪವಿತ್ರ ಮತ್ತು ದೊಡ್ಡದು ಎಂದು ಹಲಬರ್ಗಾ ರಾಚೋಟೇಶ್ವರ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಶಿಕ್ಷಕರ ದಿನ ನಿಮಿತ್ತ ಶಿಕ್ಷಕರ ವಿಕಾಸ ಪರಿಷತ್ ಹಾಗೂ ಸ್ಪರ್ಧಾ ಸಂಕಲ್ಪ ಅಕಾಡೆಮಿ ಸಹಯೋಗದಡಿ ನಗರದಲ್ಲಿ ಏರ್ಪಡಿಸಿದ್ದ ಗುರುವಂದನೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಸರ್ವಶ್ರೇಷ್ಠ, ಶಿಕ್ಷಕರ ವೃತ್ತಿ ನೀರಿನಂತೆ ಪವಿತ್ರವಾದದ್ದು. ವಿದ್ಯಾರ್ಥಿ ಎಂಬ ಕಲ್ಲನ್ನು ಅಚ್ಚುಕಟ್ಟಾಗಿ ಕೆತ್ತಿ ಸುಂದರ ರೂಪ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿ, ಎಲ್ಲ ಹುದ್ದೆಗಿಂತ ಶಿಕ್ಷಕ ಹುದ್ದೆ ಪವಿತ್ರ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ರೂವಾರಿ ಶಿಕ್ಷಕರು ಎಂದು ಕೊಂಡಾಡಿದರು.
ಡಾ.ಸಂಗಮೇಶ ಹಿರೇಮಠ ಮಾತನಾಡಿ, ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಗುರು ಮತ್ತು ಗುರಿ ಇರಬೇಕು. ಶಿಕ್ಷಕರು ಬೀರುವ ಪ್ರಭಾವದಿಂದ ಮಕ್ಕಳ ಜೀವನದ ದಿಕ್ಕೇ ಬದಲಾಗುತ್ತದೆ ಎಂದು ಹೇಳಿದರು.
ಸ್ಪರ್ಧಾ ಸಂಕಲ್ಪ ಅಕಾಡೆಮಿ ಮುಖ್ಯಸ್ಥ ನಾಗೇಶ ಸ್ವಾಮಿ ಮಸ್ಕಲ್ ಮಾತನಾಡಿದರು. ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲಾಡಗೇರಿ ಹಿರೇಮಠದ ಪೀಠಾಧಿಪತಿ ಶ್ರೀ ಗಂಗಾಧರ ಶಿವಾಚಾರ್ಯ, ಪಾಂಡುರಂಗ ಬೆಲ್ದಾರ್, ರಾಜಶೇಖರ ಚಂದಾ, ಬಾಬುರಾವ ದಾನಿ ಇತರರಿದ್ದರು.
ಶಿಕ್ಷಕರಾದ ಅನಂತ ಕುಲಕರ್ಣಿ, ಪ್ರಶಾಂತ ರಾಗಾ, ಓಂಪ್ರಕಾಶ ದಡ್ಡೆ, ದತ್ತಾತ್ರಿ ಸಂಪಾತೆ, ಬಸಯ್ಯ ಸ್ವಾಮಿ, ಬಳವಂತರಾವ ರಾಠೋಡ್, ರವಿ ಕುಮನೂರ, ವೈಜಿನಾಥ ಸಾಳೆ, ಶಿವರಾಜ ಜುಲಾಂಡೆ, ಮಲ್ಲಿಕಾರ್ಜುನ ಹಿಪ್ಪಳಗಾಂವ, ಸೂರ್ಯಕಾಂತ ಮಡಿವಾಳ, ಹನುಮಂತರಾವ, ಶಿವರಾಜ ಅಗ್ರೆ, ರಾಮರಾವ ಪಾಂಡ್ರೆ, ಗಣಪತಿ ಸಿದ್ದೇಶ್ವರ, ಶಶಿಕಾಂತ ಜೋಶಿ, ಮಲ್ಲಿಕಾರ್ಜುನ ಸಿಂದಗೇರಾ, ರಾಮಲಿಂಗ, ಲಕ್ಷ್ಮೀಬಾಯಿ ಬಿರಾದಾರ್, ಅಂಬಿಕಾ ಹಳ್ಳಿಖೇಡೆ, ಪೂಜಾ, ರಾಯಣ್ಣೂರ, ರಾಖಿ, ಬಸವರಾಜ ಕಾಡೆ, ವೀರಭದ್ರಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ, ಮನೋಹರಸಿಂಗ್ ಪಾಟೀಲ್, ಮಾರುತಿ ಬಿರಾದಾರ್, ವಿಜಯಕುಮಾರ ಪಾಟೀಲ್, ಗೋವಿಂದ ಪೂಜಾರಿ ಇತರರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net