ಲಂಡನ್ ನಲ್ಲಿ ಕನ್ನಡ ಕಲರವ

Adish wali
Published on

ಬೀದರ್: ಲಂಡನ್ ಸಂಸತ್ ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಬೀದರನವರಾದ ಯುಕೆ-ಲಂಡನ್ ಯುಥ್ ಕೌನ್ಸಿಲ್ನ ಭಾರತೀಯ ಸದಸ್ಯ ಆದೀಶ್ ರಜಿನೀಶ್ ವಾಲಿ ಗಮನ ಸೆಳೆದಿದ್ದಾನೆ.
ಹವಾಮಾನ ಮತ್ತು ಯುಕೆ ಸರ್ಕಾರದ ನೀತಿ ವಿಷಯದ ಮೇಲೆ ಆದೀಶ್, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಭಾಷಣ ಪ್ರಾರಂಭಿಸಿ ಹವಾಮಾನದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು.
ಹವಾಮಾನ ಬದಲಾವಣೆಯಿಂದಾಗಿ ಪ್ರೇರಿತವಾದ ವಲಸೆ ಸಮಸ್ಯೆ ಬಗ್ಗೆ ವಿವರಿಸಿದರಲ್ಲದೆ ವಲಸೆ ಸಮುದಾಯಗಳನ್ನು ಒಪ್ಪಿಕೊಳ್ಳುವ ನೀತಿ ರೂಪಿಸುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
ಲಂಡನ್ ಯುವ ಸಮಿತಿಯಲ್ಲಿರುವ ಜತೆಗೆ ಕನ್ನಡ ಸಾಹಿತ್ಯ ಪರಿಷತ್‌ ನ ಯುನೈಟೆಡ್ ಕಿಂಗ್ಡಮ್ ಗೌರವಯುತ ಯುವ ಸಂಯೋಜಕರಾಗಿಯೂ ಆದೀಶ್ ಕಾರ್ಯನಿರ್ವಹಿಸುತ್ತಿದ್ದಾರೆ.
ಎಚ್ಕೆಇ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಅವರ ಪುತ್ರ ಆದೀಶ್, ಕಳೆದ ವರ್ಷ ಸಿಟಿ ಯೂನಿವರ್ಸಿಟಿ ಲಂಡನ್ನ ಎಂಎಸ್ ಬಿಜಿನೆಸ್ ಮ್ಯಾನೇಜ್ಮೆಂಟ್ ಪದವಿ ಸ್ವೀಕಾರ ಸಮಾರಂಭದಲ್ಲಿ ಕನ್ನಡ ಧ್ವಜ ರಾರಾಜಿಸಿ ವಿಶ್ವದ ಗಮನ ಸೆಳೆದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net