ರೂ.43.87 ಲಕ್ಷದ ಸ್ವತ್ತು ಜಪ್ತಿ

sp office
Published on

ಬೀದರ್: ಜಿಲ್ಲೆಯ ವಿವಿಧ ಒಂಬತ್ತು ಪೊಲೀಸ್ ಠಾಣೆಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಕಳವಾಗಿದ್ದ 69 ಬೈಕ್, ಆಭರಣ, ನಗದು ಸೇರಿ 43.87 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.
ಬಂಗಾರ, ಬೆಳ್ಳಿ, ಬೈಕ್, ಶ್ರೀಗಂಧ ಮರ, ಜಾನುವಾರು, ನೀರಿನ ಪಂಪ್ ಸೆಟ್, ನಗದು ಕಳವು ಪ್ರಕರಣಗಳಲ್ಲಿ 25 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹುಮನಾಬಾದ್ ಸೇರಿ ಅನೇಕ ಕಡೆ ನಕಲಿ ಕೀ ಬಳಸಿ ಬೈಕ್ಗಳನ್ನು ಕಳವು ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ್ದು, ಔರಾದ್, ಭಾಲ್ಕಿ, ಔರಾದ್ ನಲ್ಲೂ ಅನೇಕ ಪ್ರಕರಣ ದಾಖಲಾಗಿದ್ದವು. ಅಲ್ಲದೆ ಪಕ್ಕದ ಜಹೀರಾಬಾದ್ನಲ್ಲೂ ಈ ತಂಡ ಬೈಕ್ ಕಳವು ಮಾಡಿತ್ತು. ಹುಮನಾಬಾದ್ ಠಾಣೆಯಲ್ಲಿ 1.88 ಲಕ್ಷದ ಬಂಗಾರದ ವಸ್ತುಗಳ ಕಳವು ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಭಾಲ್ಕಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಏಳು ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಪತ್ತೆ ಹಚ್ಚಲಾಗಿದೆ. ಕಮಲನಗರ ಠಾಣೆ ವ್ಯಾಪ್ತಿಯಲ್ಲಿ 28 ಕುರಿಗಳ ಕಳವು ಮಾಡಿ ವಾಹನದಲ್ಲಿ ಕೊಂಡೊಯ್ಯುವಾಗ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಔರಾದ್ ಠಾಣೆ ವ್ಯಾಪ್ತಿಯಲ್ಲಿ ಐದು ಪ್ರಕರಣ ಪತ್ತೆ ಹಚ್ಚಿ 9.29 ಲಕ್ಷದ ಸ್ವತ್ತು ಪತ್ತೆ ಮಾಡಿದ್ದು, ಮೂವರನ್ನು ಬಂಧಿಸಲಾಗಿದೆ. ಇಲ್ಲಿನ ಗಾಂಧಿಗಂಜ್ ಠಾಣೆ ವ್ಯಾಪ್ತಿಯಲ್ಲಿ 4.20 ಲಕ್ಷದ 60 ಗ್ರಾಂ ಚಿನ್ನಾಭರಣ ಪತ್ತೆ ಹಚ್ಚಲಾಗಿದೆ. ಹೀಗೆ 43.87 ಲಕ್ಷದ ಸ್ವತ್ತು ಜಪ್ತಿ ಮಾಡಿ 25 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಎಸ್ಪಿಗಳಾದ ಚಂದ್ರಕಾಂತ ಪೂಜಾರಿ, ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಿವನಗೌಡ ಪಾಟೀಲ್, ಸಿಪಿಐ ಹಣಮರಡ್ಡಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net