

ಔರಾದ್ : ಅಪರಾಧ ಪ್ರಕರಣ ಹತೋಟಿಗೆ ತರಲು ಮತ್ತು ಅಹಿತಕರ ಘಟನೆ ಜರುಗಿದರೆ ಶೀಘ್ರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಮುಸ್ತಾಪುರ ಕ್ರಾಸ್ (ಬೀದರ್-ಔರಾದ್ ಹೆದ್ದಾರಿ ಸಮೀಪ)ನಲ್ಲಿ ಲಾಧಾ ಗ್ರಾಮ ಪಂಚಾಯಿತಿಯಿಂದ 360 ಡಿಗ್ರಿಯ ಆತ್ಯಾಧುನಿಕ ತಂತ್ರಜ್ಞಾನದ ನಾಲ್ಕು ಸಿಸಿ ಕ್ಯಾಮರಾ ಶುಕ್ರವಾರ ಅಳವಡಿಸಲಾಗಿದೆ.
ಗ್ರಾಪಂ ಅಧ್ಯಕ್ಷ ನಾಗಪ್ಪ ಮುಸ್ತಾಪುರ ಉದ್ಘಾಟಿಸಿ ಮಾತನಾಡಿ, ವಾಹನಗಳ ಅತಿಯಾದ ವೇಗ, ಸಂಚಾರ ನಿಯಮ ಉಲ್ಲಂಘನೆ ಹಾಗೂ ಇತರ ಅಪರಾಧಗಳ ಮೇಲೆ ಕಣ್ಗಾವಲು ಇಡಲು ಪೊಲೀಸರಿಗೆ ಕ್ಯಾಮರಾಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಸದ್ಯ ಮುಸ್ತಾಪುರ ಕ್ರಾಸ್ ನಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು, ಬರುವ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಸಂತಪುರ ಠಾಣೆ ಪಿಎಸ್ಐ ನಂದಕುಮಾರ ಮುಳೆ, ಸತೀಶ್ ವಗ್ಗೆ, ಪಿಡಿಒ ನಾಗೇಶ ಮುಕ್ರಂಬೆ, ಧನರಾಜ, ಮಧುಕರ್, ಶರಣಪ್ಪ ನಾಗಲಗಿದ್ದೆ, ಬಸವರಾಜ ಮಿಠಾರೆ, ಇರ್ಫಾನ್, ಸಂತೋಷ, ಕೈಲಾಶ ಇತರರಿದ್ದರು.