

ಬೀದರ್: ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಅಪರಾಧಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ಶಾಬೊದ್ದೀನ್ ಶಿಕ್ಷೆಗೆ ಗುರಿಯಾದವ. ಪ್ರೀತಿ ಮಾಡುವಂತೆ ಅದೇ ಗ್ರಾಮದ ಯುವತಿಯನ್ನು ಪೀಡಿಸುತ್ತಿದ್ದ. ಇದಕ್ಕೆ ಸ್ಪಂದಿಸದ್ದರಿಂದ 2018ರ ಜ.27ರಂದು ಕಾಲೇಜಿಗಾಗಿ ಬೀದರ್ ಗೆ ಬಂದಿದ್ದ ವೇಳೆ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಂಧೀಶ ಸಚಿನ್ ಕೌಶಿಕ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ (ಯುವತಿ ಕುಟುಂಬಕ್ಕೆ 35 ಸಾವಿರ ರೂ., ಸಕರ್ಾರಕ್ಕೆ 15 ಸಾವಿರ ರೂ.) ವಿಸಿದ್ದಾರೆ. ಸರ್ಕಾರಿ ಅಭಿಯೋಜಕ ಶರಣಗೌಡ ಪಾಟೀಲ್ ವಾದಿಸಿದ್ದರು. ಘಟನೆ ನಡೆದ ವೇಳೆ ಜಿಲ್ಲಾದ್ಯಂತ ಭಾರಿ ಹೋರಾಟ ನಡೆದಿತ್ತು. ಬೀದರ್ ಬಂದ್ ಗೆ ಕರೆ ನೀಡಿ ಅತ್ಯಾಚಾರಿಗೆ ಕಠಿಣ ಶಿಕ್ಷೆ ನೀಡುವಂತೆ ಹಿಂದುಪರ ಸಂಘಟನೆಗಳು ಒತ್ತಾಯಿಸಿದ್ದವು.