ಉಪಾಧ್ಯಾಯರ ಚಿಂತನೆ ಅನುಸರಿಸಿ

Tanda
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಔರಾದ್: ಶ್ರೇಷ್ಠ ಚಿಂತಕರಾಗಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯರ ಅವರ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಘಮಸುಬಾಯಿ ತಾಂಡಾದಲ್ಲಿ ಬುಧವಾರ ಏರ್ಪಡಿಸಿದ್ದ ಪಂಡಿತ ದೀನ್ ದಯಾಳ ಉಪಾಧ್ಯಾಯ ಕಾರ್ಯಕ್ರಮದಲ್ಲಿ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಅಪಾರ ದೇಶಪ್ರೇಮ ಹೊಂದಿದ್ದ ದೀನದಯಾಳ್ ಅವರು ದೇಶ ಮೊದಲು, ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುವ ತತ್ವವನ್ನು ಪ್ರತಿಪಾದಿಸುತ್ತಿದ್ದರು ಎಂದರು.
ಅಖಂಡ ಭಾರತದ ಸಂಕಲ್ಪ ಹೊಂದಿದ್ದ ಉಪಾಧ್ಯಾಯರು ಕಾಂಗ್ರೆಸ್ ಸರ್ಕಾರದ ಸಿದ್ಧಾಂತಗಳನ್ನು ಕ್ಕರಿಸಿ ಪಕ್ಷವನ್ನು ತೊರೆದು ದೇಶದಲ್ಲಿ ಜನಸಂಘ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಗುರುನಾಥ ರಾಜಗೀರಾ, ಬಂಟಿ ರಾಂಪುರೆ, ಸಂಜು ಮುರ್ಕಿ, ರವೀಂದ್ರರಡ್ಡಿ, ಸಚಿನ್ ಬಿರಾದಾರ್, ಉದಯ ಸೋಲಾಪುರೆ, ರಾಜಕುಮಾರ ಸೋರಾಳೆ, ಪ್ರದೀಪ ಪವಾರ್, ಸುಜೀತ್ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net