

ಬೀದರ್: ಭಾಲ್ಕಿ ತಾಲ್ಲೂಕಿನ ಜೈನಾಪುರ ಗ್ರಾಮದ ಯುವ ಮುಖಂಡ ಸಂಗಮೇಶ ಜ್ಯಾಂತೆ ಅವರನ್ನು ಬೆಂಗಳೂರಿನ ಸೂರ್ಯ ಫೌಂಡೇಷನ್ ವತಿಯಿಂದ ಕೊಡಲಾಗುವ 2024ನೇ ಸಾಲಿನ ರಾಜ್ಯಮಟ್ಟದ ಯುವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ್ಯಾಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಕನ್ನಡ ಪರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಪ್ರಶಸ್ತಿ, ಸಮ್ಮಾನಗಳಿಗೆ ಭಾಜನರಾಗಿದ್ದಾರೆ.
ಜ್ಯಾಂತೆ ಅವರು ರಾಜ್ಯಮಟ್ಟದ ಯುವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಹಿರಿಯ ಸಾಹಿತಿ ಡಾ. ಬಸವರಾಜ ಬಲ್ಲೂರ, ಶಿವಕುಮಾರ ಕಟ್ಟೆ, ಟಿ.ಎಂ. ಮಚ್ಚೆ, ಶಿವಶಂಕರ ಟೋಕರೆ, ಎಂ.ಎಸ್. ಮನೋಹರ, ಸಿದ್ಧಾರೆಡ್ಡಿ ನಾಗೂರಾ, ನಾಗೇಶ ಸ್ವಾಮಿ, ಶಿವಕುಮಾರ ಪಾಟೀಲ ಮೊದಲಾದವರು ಸಂತಸ ವ್ಯಕ್ತಪಡಿಸಿದ್ದಾರೆ.