

ಬೀದರ್: ಇಲ್ಲಿಯ ಉದ್ಯಮಿ ನಾಗನಾಥ ವಿಶ್ವಕರ್ಮ ಅವರಿಗೆ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ವತಿಯಿಂದ ಕೊಡಲಾಗುವ ಪ್ರಸಕ್ತ ಸಾಲಿನ ವಿಶ್ವಕರ್ಮ ರತ್ನ ಪ್ರಶಸ್ತಿ ಸಂದಿದೆ.
ನಗರದ ಜಿಲ್ಲಾ ರಂಗ ಮಂದಿರದಲ್ಲಿ ಈಚೆಗೆ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹುಮನಾಬಾದ್‍ನ ಶ್ರೀನಿವಾಸ್ ಸ್ವಾಮೀಜಿ, ಮುಖಂಡರಾದ ಅಮೃತರಾವ್ ಚಿಮಕೋಡೆ, ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಾಂಚಾಳ, ಉಪಾಧ್ಯಕ್ಷ ಪಾಂಡುರಂಗ ಪಾಂಚಾಳ, ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ, ಖಜಾಂಚಿ ನಾರಾಯಣ ವಿಶ್ವಕರ್ಮ, ಭೀಮೇಶ್ ಪಾಂಚಾಳ, ಶಾಮರಾವ್ ವಿಶ್ವಕರ್ಮ, ಮನೋಹರ ವಿಶ್ವಕರ್ಮ, ಅಣ್ಣೆಪ್ಪ ವಿಶ್ವಕರ್ಮ, ಈರಣ್ಣ ವಿಶ್ವಕರ್ಮ, ದೇವೇಂದ್ರ ವಿಶ್ವಕರ್ಮ, ಸದಾನಂದ ವಿಶ್ವಕರ್ಮ, ರವಿಕುಮಾರ ವಿಶ್ವಕರ್ಮ ಹುಮನಾಬಾದ್, ದೀಪಕ್ ವಿಶ್ವಕರ್ಮ, ಚಂದ್ರಕಾಂತ ಶ್ರೀಮಂಡಲ, ಬಾಬುರಾವ್ ಚಾಂಬೋಳ್, ನಾಗನಾಥ ವಿಶ್ವಕರ್ಮ ಬರದಾಪುರ, ಜಗನ್ನಾಥ ವಿಶ್ವಕರ್ಮ, ನಾಗಮೂರ್ತಿ ವಿಶ್ವಕರ್ಮ, ಅಬ್ದುಲ್ ಮನ್ನಾನ್ ಸೇಠ್, ಬಸವರಾಜ ಮಾಳಗೆ, ಡಾ. ರಾಜಶೇಖರ ಸೇಡಂಕರ್, ಮತ್ತಿತರರು ಇದ್ದರು.