ಅರುಣೋದಯ ಶಾಲೆ ವಿದ್ಯಾರ್ಥಿನಿ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ

Arunodaya School
Published on

ಬೀದರ್: ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ವಿಕಾಸ ಅಕಾಡೆಮಿ ವತಿಯಿಂದ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಇಲ್ಲಿಯ ಅರುಣೋದಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ದೀಪಕ್ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ವೈಷ್ಣವಿ ಅತ್ಯುತ್ತಮ ಭಾಷಣದ ಮೂಲಕ ಮೊದಲ ಬಹುಮಾನಕ್ಕೆ ಪಾತ್ರರಾದರು.
ಸನ್ಮಾನ: ಭಾಷಣ ಸ್ಪರ್ಧೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದ ವೈಷ್ಣವಿ ಅವರನ್ನು ಶಾಲೆಯಲ್ಲಿ ಸೋಮವಾರ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಹಳ್ಳದಕೇರಿ ವಲಯದ ಸಿಆರ್‍ಸಿ ಸುಜಾತಾ ಮಠಪತಿ, ಶಿಕ್ಷಕರಾದ ಮಾರುತೆಪ್ಪ, ಅಲ್ಕಾವತಿ, ಸಾರಿಕಾ, ನೀಲಮ್ಮ, ಜ್ಯೋತಿ, ಮಧುಮತಿ, ಪೂಜಾ, ಚಂದ್ರಕಲಾ, ರೇಣುಕಾ, ಸುನೀತಾ ಕಾಜಿ, ಭಾಗ್ಯಶ್ರೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net