ಸಿದ್ಧಾಂಥ ಶಿಖಾಮಣಿ ಗ್ರಂಥದ ಸಾರ ಅರಿಯಿರಿ

Siddhant Shikamani Samaroop
Published on

ಬೀದರ್: ಸಿದ್ಧಾಂಥ ಶಿಖಾಮಣಿ ಗ್ರಂಥದ ಸಾರವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಬೆಲ್ದಾಳೆ ಕನ್ವೆನ್ಷನ್ ಹಾಲ್‍ನಲ್ಲಿ ಭಾನುವಾರ ನಡೆದ ಶ್ರೀ ಸಿದ್ಧಾಂಥ ಶಿಖಾಮಣಿ ಅಭಿಯಾನ, ಶ್ರಾವಣ ಶಿವ ದರ್ಶನ ಸಂಚಾರ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಿದ್ಧಾಂಥ ಶಿಖಾಮಣಿ ಗ್ರಂಥ ಎಲ್ಲ ಸಿದ್ಧಾಂತಗಳಿಗೆ ಶಿಖಾಮಣಿ ಆಗಿದೆ. ಭಗವತ್ ಸಾಕ್ಷಾತ್ಕಾರದ ಸೂತ್ರ ಒಳಗೊಂಡಿದೆ. ಇದು, ವೀರಶೈವ ಲಿಂಗಾಯತರಿಗಷ್ಟೇ ಅಲ್ಲ; ಇಡೀ ಮನುಕುಲದ ಧರ್ಮಗ್ರಂಥವಾಗಿದೆ ಎಂದು ತಿಳಿಸಿದರು.
ಸಿದ್ಧಾಂತ ಶಿಖಾಮಣಿ ಬಗ್ಗೆ ಮೂಗಿನ ನೇರಕ್ಕೆ ಮಾತನಾಡುವ ಕೆಲವರಿಗೆ ಅದರ ಗಂಧ, ಗಾಳಿಯೇ ಗೊತ್ತಿಲ್ಲ. ಯಾವುದೇ ಗ್ರಂಥದ ವರ್ಣನೆ ಮಾಡಲು ಆ ಗ್ರಂಥವನ್ನು ಅರ್ಧಂಬರ್ಧ ಓದಿದರೂ ನಡೆಯುತ್ತದೆ. ಆದರೆ, ನಿರಾಕರಿಸಲು ಸಂಪೂರ್ಣ ಓದಬೇಕಾಗುತ್ತದೆ ಎಂದು ಹೇಳಿದರು.
ಗ್ರಂಥದ ಬಗ್ಗೆ ತಿಳಿದುಕೊಳ್ಳದವರಿಗೆ ಅದನ್ನು ನಿರಾಕರಿಸುವ ಯಾವುದೇ ಅಧಿಕಾರ ಇರುವುದಿಲ್ಲ. ಹೀಗಾಗಿ ಸಿದ್ಧಾಂತ ಶಿಖಾಮಣಿ ಬಗ್ಗೆ ಹಗುರವಾಗಿ ಮಾತನಾಡುವವರು ಮೊದಲು ಗ್ರಂಥವನ್ನು ಸರಿಯಾಗಿ ಓದಬೇಕು. ಆಗ ಅವರಿಗೆ ಅದರ ಮಹತ್ವ ಅರಿವಿಗೆ ಬರಲಿದೆ. ಅನಂತರವಷ್ಟೇ ಅವರು ಗ್ರಂಥವನ್ನು ಪುರಸ್ಕರಿಸುವ ಇಲ್ಲವೇ ತಿರಸ್ಕರಿಸುವ ನಿರ್ಣಯ ಕೈಗೊಳ್ಳಬಹುದು ಎಂದು ತಿಳಿಸಿದರು.
ಶ್ರಾವಣ ನಿಮಿತ್ತ ಶಿವ ದರ್ಶನ ಸಂಚಾರ ಶೀರ್ಷಿಕೆಯಡಿ ವಿವಿಧೆಡೆ ಪ್ರವಚನ ಕೈಗೊಂಡ ಡಾ. ರಾಜಶೇಖರ ಶಿವಾಚಾರ್ಯ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ ನಡೆಸಿದ ಶಿವಯ್ಯ ಸ್ವಾಮಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮಾರಂಭವನ್ನು ಉದ್ಘಾಟಿಸಿದರು. ಪೌರಾಡಳಿತ ಸಚಿವ ರಹೀಂಖಾನ್ ಅವರು ಪಂಚಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಜ್ಞಾನ ಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯ, ಕಡಗಂಚಿಯ ವೀರಭದ್ರ ಶಿವಾಚಾರ್ಯ ನೇತೃತ್ವ, ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ ಸಮ್ಮುಖ ವಹಿಸಿದ್ದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಿವಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್, ಚಿತ್ರ ನಿರ್ದೇಶಕ ಎಸ್. ನಾರಾಯಣ, ಉದಗಿರದ ವೀರಶೈವ ಮುಖಂಡ ರಾಜೇಶ್ವರ ನಿಟ್ಟೂರೆ ಹಾಗೂ ಉದ್ಯಮಿ ಜಿ.ಟಿ. ಸುರೇಶಕುಮಾರ ಅವರಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್, ಜಿ.ಎನ್. ಸಹಕಾರ ಆಸ್ಪತ್ರೆಯ ಉಪಾಧ್ಯಕ್ಷ ತರುಣ್ ಎಸ್. ನಾಗಮಾರಪಳ್ಳಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಶಿವಶರಣಪ್ಪ ವಾಲಿ, ಉಪಾಧ್ಯಕ್ಷ ಆರ್.ಜಿ. ಮಠಪತಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಾಟೀಲ, ಕಾರ್ಯದರ್ಶಿಗಳಾದ ಬಾಪುರಾವ್ ದೇಶಮುಖ, ವರದಯ್ಯ ಸ್ವಾಮಿ, ಶಿವಕುಮಾರ ಪಾಟೀಲ ತೇಗಂಪುರ, ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಶಕುಂತಲಾ ಬೆಲ್ದಾಳೆ, ಮುಖಂಡರಾದ ಜಗದೇವ ಹಿರೇಮಠ, ಬಾಬುರಾವ್ ತುಂಬಾ, ಬಸವರಾಜ ದೇಶಮುಖ, ಆನಂದ ದೇವಪ್ಪ, ಕುಶಾಲರಾವ್ ಯಾಬಾ, ಕಾಶಿನಾಥ ಹಿರೇಮಠ, ಓಂಪ್ರಕಾಶ ರೊಟ್ಟೆ, ರಾಜು ಕಡ್ಯಾಳ, ಹಣಮಂತಪ್ಪ ಮರಕುಂದಾ, ಡಾ. ಬಸವರಾಜ ದಾಬಕೆ, ಶರಣಪ್ಪ ಪಂಚಾಕ್ಷರಿ, ಪ್ರಭು ಸಾವಳಗಿ, ಮಲ್ಲಿಕಾರ್ಜುನ ಪಾಟೀಲ ಚಿಟಗುಪ್ಪ, ಮಹಾದೇವಿ ಹುಮನಾಬಾದೆ, ಕುಶಾಲರಾವ್ ಭಂಗೂರೆ, ಗುಣವಂತರಾವ್ ಶಿಂಧೆ ಅತಿಥಿಗಳಾಗಿದ್ದರು.
ಪ್ರಮುಖರಾದ ಅಂಬರೀಶ್ ಸ್ವಾಮಿ, ಸಿದ್ದು ಫುಲಾರೆ, ಕಂಟೆಪ್ಪ ಭಂಗೂರೆ, ಕಾಶಿನಾಥ ಜಕ್ಕಾ, ಬಸವರಾಜ ಹಾಲಹಳ್ಳಿ, ಗಂಗಾಧರ ಸ್ವಾಮಿ, ನಾಗೇಶ ಹಾಲಕೂಡೆ, ಪ್ರವೀಣ್ ಸ್ವಾಮಿ, ನಾಗರಾಜ ಮಠ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಶಿವಶಂಕರ ಬೆಮಳಗಿ, ರಾಕೇಶ್ ಮಠಪತಿ, ರೇವಣಸಿದ್ದಯ್ಯ ಸ್ವಾಮಿ, ಸಂಜೀವ ಸ್ವಾಮಿ, ಆನಂದ ಪಾಟೀಲ, ಶಿವಾನಂದ ಸ್ವಾಮಿ ಬಾಳೂರ, ಶಂಕರರಾವ್ ಸಜ್ಜನ್ ಮತ್ತಿತರರು ಇದ್ದರು.
ಕಲಾವಿದೆ ರಾಣಿ ಸತ್ಯಮೂರ್ತಿ ತಂಡದವರು ಭರತನಾಟ್ಯ ಪ್ರದರ್ಶಿಸಿದರು. ಡಾ. ಸಿದ್ರಾಮಯ್ಯ ಸ್ವಾಮಿ ಗೋರಟಾ ಹಾಗೂ ಸಂಗಡಿಗರು ಸಂಗೀತ ನಡೆಸಿಕೊಟ್ಟರು.
ನವಲಿಂಗ ಪಾಟೀಲ ನಿರೂಪಿಸಿದರು. ಮಹೇಶ ಪಾಟೀಲ ಸ್ವಾಗತಿಸಿದರು. ಮಹಾಂತೇಶ ಬಿರಾದಾರ ವಂದಿಸಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net