ರೆಡ್ ಕ್ರಾಸ್ ನಿಂದ ಮಾನವೀಯತೆಗಾಗಿ ಜಾಥಾ

red cross
Published on

ಬೀದರ್: ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆ ನಿಮಿತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ನಗರದಲ್ಲಿ ಮಾನವೀಯತೆಗಾಗಿ ಜಾಥಾ ನಡೆಯಿತು.
ಬಿವಿಬಿ ಕಾಲೇಜಿನಿಂದ ಶುರುವಾದ ಜಾಥಾ ಬೊಮ್ಮಗೊಂಡೇಶ್ವರ ವೃತ್ತದ ಮೂಲಕ ವಿ.ಕೆ. ಇಂಟರ್ ನ್ಯಾಷನಲ್ ಶಾಲೆಗೆ ಆಗಮಿಸಿ ಮುಕ್ತಾಯಗೊಂಡಿತು. ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರ್ಯಾಲಿಯುದ್ದಕೂ ಭಾರತ ಮಾತೆಗೆ ಜಯವಾಗಲಿ, ವಿಶ್ವ ಶಾಂತಿಗಾಗಿ ನಮ್ಮ ನಡೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಜಯವಾಗಲಿ, ಮಾನವೀಯತೆ ಬೆಳೆಯಲಿ ವಿಶ್ವ ಬೆಳಗಲಿ ಜಯಘೋಷಗಳು ಮೊಳಗಿದವು.
ಬಿವಿಬಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿಠಲರಡ್ಡಿ ಉದ್ಘಾಟಿಸಿ ಮಾತನಾಡಿ, ಅಧಿಕಾರ ದಾಹ ಹಾಗೂ ಸ್ವಾರ್ಥದಿಂದ ವಿಶ್ವದಲ್ಲಿ ಯುದ್ಧ, ಭಯೋತ್ಪಾದಕತೆ, ಅತ್ಯಾಚಾರಗಳು ನಡೆಯುತ್ತಿವೆ. ಇವುಗಳನ್ನು ತಡೆಯಬೇಕಾದರೆ ವಿಶ್ವಶಾಂತಿ ತತ್ವ, ಮಾನವೀಯ ಮೌಲ್ಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೆಡ್ ಕ್ರಾಸ್ ಜಿಲ್ಲಾಧ್ಯಕ್ಷೆ ಡಾ.ವಿದ್ಯಾ ಪಾಟೀಲ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಶಾಖೆ ಘಟಕ ರಚಿಸಿ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌಹಾರ್ದತೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ವೀರಶೆಟ್ಟಿ ಮೈಲೂರಕರ್, ರಾಜ್ಯ ಪ್ರತಿನಿಧಿ ಡಾ.ವೈಜಿನಾಥ ಕಮಠಾಣೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಡಾ.ದಿಲೀಪ್ ಕಮಠಾಣೆ, ಖಜಾಂಚಿ ಡಾ.ಸುಮನ್ ಸಿಂಧೆ, ತಾಲೂಕು ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ, ಅನೀಲಕುಮಾರ ಆಣದೂರೆ, ಧನರಾಜ ಪಾಟೀಲ್, ಯುನೂಸ್, ಸಂಗಮೇಶ ನೇಳಗೆ, ವೈಜಿನಾಥ ಪಾಟೀಲ್, ಶಾಂತಲಾ ಮೈಲೂರಕರ್, ಪರಮೇಶ್ವರ ಬಿರಾದಾರ್, ಸಂತೋಷಕುಮಾರ ಮಂಗಳೂರೆ, ದೀಪಾ ರಾಗಾ, ಪೂಜಾ ಸಂಗಮದ, ಶಿವಲೀಲಾ ಮಠಪತಿ, ಬಸವರಾಜ ಬಿರಾದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net