

ಬೀದರ್: ರಾಜ್ಯ ರಸ್ತೆ ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘದ ಬೀದರ್ ವಿಭಾಗ 2023-24ರಲ್ಲಿ 1,34,96,833 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರೂ ಆದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಎಸ್. ಫುಲೇಕರ್ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 1.34 ಕೋಟಿ ರೂ. ಗರಿಷ್ಠ ಲಾಭ ಗಳಿಸುವ ಮೂಲಕ ಕಕ ಸಾರಿಗೆ ನಿಗಮದಲ್ಲಿ ಬೀದರ್ ಪ್ರಥಮ ಸ್ಥಾನದಲ್ಲಿದೆ ಎಂದರು.
ಡಿಸಿಸಿ ಬ್ಯಾಕ್ ನಲ್ಲಿ ಪಡೆದಿದ್ದ ಸಾಲ ಪಾವತಿಸಿ ಸ್ವಂತ ಷೇರು ಹಣದಲ್ಲಿ ಸಂಘ ವಹಿವಾಟು ನಡೆಸುತ್ತಿದೆ. ಸರ್ವ ಸದ್ಯಸರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ, ಸಂಘದ ಸ್ವಂತ ಕಚೇರಿ ನಿರ್ಮಾಣ ಸಂಬಂಧ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಸೂರ್ಯಕಾಂತ ಟೈಗರ್, ನಿರ್ದೇಶಕರಾದ ಅಶೋಕರಡ್ಡಿ, ಅವಿನಾಶ, ನಾಗಶೆಟ್ಟಿ, ಅನಂತಕುಮಾರ, ಸಾಯಿನಾಥ ಪಾಟೀಲ್, ಬಸವಂತರಡ್ಡಿ, ಸಂಜುಕುಮಾರ, ಜ್ಯೋತಿ, ಭಾರತಬಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಚಟ್ನಳ್ಳಿ ಇತರರಿದ್ದರು. ನಿರ್ದೇಶಕ ಬಾಬುರಾವ ಮಲ್ಕಾಪುರೆ ಸ್ವಾಗತಿಸಿದರು. ಹಣಮಂತ ಮಾಳಗೆ ನಿರೂಪಣೆ ಮಾಡಿ ವಂದಿಸಿದರು. ನಿಗಮದ ನೌಕರರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.