ಬೀದರ್ ಮಹಾನಗರ ಪಾಲಿಕೆ: ಸಂತಸ

Mahaling Swamy Chatnalli
Published on

ಬೀದರ್: ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸುವ ಘೋಷಣೆ ಮಾಡಿದ್ದಕ್ಕೆ ಬೀದರ್ ದಕ್ಷಿಣದ ಯುವ ಮುಖಂಡ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ಆದ  ನಂತರ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಲಿವೆ. ಇನ್ನಷ್ಟು ಅಗತ್ಯ ಸೌಕರ್ಯಗಳು ದೊರಕಲಿವೆ. ಬೀದರ್ ಚಿತ್ರಣ ಬದಲಾಗಲಿದೆ. ಜನರ ಜೀವನ ಮಟ್ಟವೂ ಸುಧಾರಣೆಯಾಗಲಿದೆ ಎಂದು ಹೇಳಿದ್ದಾರೆ.
ಬೀದರ್ ಮಹಾನಗರ ಪಾಲಿಕೆ ಘೋಷಣೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net