ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ

Yatre
Published on

ಬೀದರ್: ಲೋಕಕಲ್ಯಾಣ, ರೈತರ ಅಭಿವೃದ್ಧಿಗಾಗಿ ಶ್ರೀ ಡಾ.ಎನ್.ಬಿ. ರಡ್ಡಿ ಗುರೂಜಿ ನೇತೃತ್ವದಲ್ಲಿ 23ನೇ ವರ್ಷದ ಪಾದಯಾತ್ರೆ ಅಪಾರ ಭಕ್ತರ ಮಧ್ಯೆ ನಡೆಯಿತು.
ಔರಾದ್(ಎಸ್)ನಿಂದ ಶುರುವಾದ ಯಾತ್ರೆ ಬಗದಲ್, ಮನ್ನಾಎಖೇಳ್ಳಿ ಮೂಲಕ ರೇಕುಳಗಿಯ ಶ್ರೀ ಶಂಭುಲಿಂಗ ಆಶ್ರಮವರೆಗೆ ಸಾಗಿತು. ಮಾರ್ಗದುದ್ದಕ್ಕೂ ಹರ ಹರ ಮಹಾದೇವ ಘೋಷಣೆಗಳನ್ನು ಕೂಗಲಾಯಿತು. ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಪೂಜ್ಯರ ಜತೆ ಹೆಜ್ಜೆ ಹಾಕಿದರು.
ಶ್ರೀ ಗುರುಬಾಬಾ ಮಹಾರಾಜ ಔಸಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಭಾರತೀಯ ಸನಾತನ ಧರ್ಮ ಉಳಿವಿಗಾಗಿ ಇಂಥ ಪಾದಯಾತ್ರೆಗಳು ನಿರಂತರವಾಗಿ ನಡೆಯಬೇಕು. ಈ ಭಾಗದಲ್ಲಿ ಶ್ರೀ ಶಂಭುಲಿಂಗೇಶ್ವರ ಮಹಿಮೆ ಅಪಾರವಾಗಿದೆ ಎಂದರು.
ಶ್ರೀ ಕುಮಾರ ದೇವರು ಗದಗ ಮಾತನಾಡಿ, ಸನಾತನ ಧರ್ಮ ಸಂರಕ್ಷಣೆಗಾಗಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಿ ಉಜ್ವಲ ಭವಿಷ್ಯಗೊಳಿಸುವ ಅಗತ್ಯವಿದೆ ಎಂದು ನುಡಿದರು.
ಸಾಹಿತಿ ಎಂ.ಜಿ. ದೇಶಪಾಂಡೆ, ಡಾ.ರಘುಶಂಖ ಭಾತಂಬ್ರಾ, ಅಗಸುರ ಬೆನಸೂರ, ಭೂತಿಸ್ವಾಮಿ ಮಠ, ಮೋಹಿತ ಶರ್ಮಾ ಮಾತನಾಡಿದರು.
ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಮುಖಂಡರಾದ ಸುಧಾಕರರಡ್ಡಿ, ಈಶ್ವರಸಿಂಗ್ ಠಾಕೂರ್, ನಾಗಭೂಷಣ ಕಮಠಾಣೆ. ಡಾ.ವಿಶ್ವನಾಥ ತೇಗಂಪುರೆ, ವೀರೇಂದ್ರ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಜಗನಾಥ ಸಿದ್ಧ, ಡಿ.ಕೆ. ಸಂಗಮೇಶ, ಧರ್ಮೇಂದ್ರ ಪೂಜಾರಿ, ದೀಪಕ ಸಲಗರ, ರವಿ ನಾಗನಕೇರೆ, ಬಾಬುರಾವ ಪುಣ್ಯಶೆಟ್ಟಿ ಇತರರಿದ್ದರು. ಬಿಹಾರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಇತರ ರಾಜ್ಯಗಳ ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು. ಪಾದಯಾತ್ರೆ ಮಾರ್ಗದಲ್ಲಿ ಅನೇಕರು ದಾಸೋಹ ಸೇವೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net