ಬೀದರ್ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಿ

enginer day
Published on

ಬೀದರ್: ಜಿಲ್ಲೆಯ ಪ್ರಗತಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ಇಂಜಿನಿಯರ್ ಗಳು ಪೂರಕ ಯೋಜನೆಗಳನ್ನು ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ನಗರದಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್, ಕರ್ನಾಟಕ ಇಂಜಿನಿಯರಿಂಗ್ ಸರ್ವೀಸ್ ಅಸೋಸಿಯೇಷನ್ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜನಿಯರ್ಸ್ ಸಹಯೋಗದಡಿ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ 164ನೇ ಜನ್ಮದಿನ ಮತ್ತು ಇಂಜಿನಿಯರ್ ದಿನಾಚರಣೆ ಉದ್ಘಾಟಿಸಿದ ಅವರು, ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ, ಅಂತರ್ಜಲ ಮಟ್ಟ ವೃದ್ಧಿ ಮತ್ತು ನೀರಾವರಿ ಪ್ರದೇಶ ಹೆಚ್ಚಿಸಲು ಇಂಜಿನಿಯರ್‌ಗಳು ಹೊಸ ಸಂಶೋಧನೆ ಕೈಗೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.
ಸರ್ ಎಂ.ವಿಶ್ವೇಶ್ವರಯ್ಯ ಬದುಕು ಆದರ್ಶ. ಬಡತನವನ್ನು ಮೆಟ್ಟಿ ನಿಂತು ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ದೇಶ ಸೇವೆ, ಪ್ರಾಮಾಣಿಕತೆ ಎಲ್ಲರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ದೂರದೃಷ್ಟಿ ಯೋಜನೆ, ತತ್ವಗಳು ಎಲ್ಲರಿಗೂ ದಾರಿದೀಪ ಆಗಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ಈಶಾನ್ಯ ವಲಯದ ಮುಖ್ಯ ಅಭಿಯಂತರ ಶರಣಪ್ಪ ಸುಲಗುಂಟೆ ಮಾತನಾಡಿದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ವಿವಿಧ ಇಲಾಖೆ ಮುಖ್ಯಸ್ಥರಾದ ಶಿವಾಜಿ ಧೋನೆ, ರಾಮಲಿಂಗ ಬಿರಾದಾರ್, ರಾಜಕುಮಾರ, ಇಸ್ತಾಕ್ ಖುರೇಶಿ, ರಮೇಶ ಪಾಟೀಲ್, ಅಬ್ದುಲ್ ಖುದ್ದುಸ್, ಜ್ಞಾನೇಶ್ವರ, ಅರುಣಕುಮಾರ, ಅಭಿಷೇಕ ಪೋಲಾ, ಹಾವಶೆಟ್ಟಿ ಪಾಟೀಲ್, ರವೀಂದ್ರ ಮೂಲಗೆ, ಸುಧಾಕರ, ಅಶೋಕ ಪಾಟೀಲ್, ಅನೀಲ ಖೇಣಿ, ರವಿ ಬಿಚಕುಂದೆ, ಸಿದ್ದು ಚಿಟಮೆ, ವೀರೇಂದ್ರ ವಿ., ರಾಜಕುಮಾರ ಇತರರಿದ್ದರು. ಚನ್ನಬಸವ ಹೇಡೆ ನಿರೂಪಣೆ ಮಾಡಿದರು.

ಅಭಿಯಂತರರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿರುವ ಅಂಬಾದಾಸ ಉಜನಿಕರ್, ರಾಜು ಡಾಂಗೆ, ಶಶಿಕಾಂತ ಮಳ್ಳಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 60ಕ್ಕೂ ಅಕ ಇಂಜಿನಿಯರ್ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net