ಇಂಜಿನಿಯರ್ ಸೇವೆ ಅಮೋಘ

Rangmandir
Published on

ಬೀದರ್: ದೇಶದಲ್ಲಿ ಇಂಜಿನಿಯರ್ ಗಳ ಸೇವೆ ಅಮೋಘವಾಗಿದೆ. ಅವರು ದೇಶ ಕಟ್ಟುವ ಮತ್ತು ಕೀರ್ತಿ ಹೆಚ್ಚಿಸುವ ಕೆಲಸ ನಿರಂತರ ಮಾಡಬೇಕು ಎಂದು ರಾಜ್ಯ ಆಡಳಿತ ನ್ಯಾಯಮಂಡಳಿ ಸದಸ್ಯ ರಾಘವೇಂದ್ರ ಔರಾದಕರ್ ಹೇಳಿದರು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನಿಂದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಏರ್ಪಡಿಸಿದ್ದ ಇಂಜಿನಿಯರ್ಸ್ ದಿನಾಚರಣೆ ಉದ್ಘಾಟಿಸಿದ ಅವರು, ವಿಶ್ವೇಶ್ವರಯ್ಯನವರ ದೇಶ ಸೇವೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಅಸೋಸಿಯೇಷನ್ ಅಧ್ಯಕ್ಷ ಅಶೋಕಕುಮಾರ ಉಪ್ಪೆ, ವೀರಶೆಟ್ಟಿ ಮಣಗೆ, ಟಾಟಾ ಏಜೆನ್ಸಿ ನಿರ್ದೇಶಕ ಜೀತೇಂದ್ರ ಫಣಿ, ಓಂಕಾರ ಪಾಟೀಲ್, ದಿಲೀಪ ನಿಟ್ಟೂರೆ, ಮಹೇಶ ಬುರೆಂದೆ, ರಾಜಶೇಖರ ಕರ್ಪೂರ್, ಸಂದೀಪ ಕಾಡಾದೆ, ಶಿವಕುಮಾರ ಪಾಟೀಲ್, ಸಂತೋಷ ಸುಂಕದ, ಪ್ರಹ್ಲಾದ್, ಶಿವಶರಣಪ್ಪ ವಾಲಿ ಇತರರಿದ್ದರು.
ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಭವ್ಯ ಮೆರವಣಿಗೆಗೆ ಉದ್ಯಮಿ ಸೋಮಶೇಖರ ಪಾಟೀಲ್ ಗಾದಗಿ ಚಾಲನೆ ನೀಡಿದರು. ಭಗತ್ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಕನ್ನಡಾಂಬೆ ಸರ್ಕಲ್ ಮೂಲಕ ರಂಗಮಂದಿರವರೆಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net