ಸಮಾಜಕ್ಕೆ ಮಹಾಸಭೆ ಕೊಡುಗೆ ಅಪಾರ

kokila sanman
Published on

ಬೀದರ್: ಸಮಾಜಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕೊಡುಗೆ ಅಪಾರವಾಗಿದೆ ಎಂದು ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಹೇಳಿದರು.
ನಗರದಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ನಿಂದ ಏರ್ಪಡಿಸಿದ್ದ ಮಹಾಸಭೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಕೋಕಿಲಾ ಮಹಾದೇವಪ್ಪ ಬಿರಾದಾರ್ ಸನ್ಮಾನ ಸಮಾರಂಭ ಉದ್ಘಾಟಿಸಿದ ಅವರು, ಹಾನಗಲ್ ಗುರುಕುಮಾರ ಶಿವಯೋಗಿಗಳು 120 ವರ್ಷದ ಹಿಂದೆ ಮಹಾಸಭೆ ಸ್ಥಾಪಿಸಿದ್ದು, ಪ್ರಸ್ತುತ ಬೃಹತ್ ಪ್ರಮಾಣದಲ್ಲಿ ಬೆಳೆದು ಅಸಂಖ್ಯ ಸದಸ್ಯರೊಂದಿಗೆ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಬ್ರಿಮ್ಸ್ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ್ ಮಾತನಾಡಿದರು. ಮಾತೋಶ್ರೀ ಅಮೃತಾನಂದಮಯಿ ಬೆಳ್ಳೂರು ಸಾನ್ನಿಧ್ಯ, ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಸಿದ್ರಾಮಯ್ಯ ಹಿರೇಮಠ, ಶೈಲಜಾ ಹುಡಗೆ ಮಾತನಾಡಿದರು.
ಟ್ರಸ್ಟ್ ಕಾರ್ಯದರ್ಶಿ ಭಾರತಿ ಬಿರಾದಾರ್, ಪ್ರಮುಖರಾದ ಸಂಗಮೇಶ ಮೂಲಗೆ, ಶರಣಯ್ಯ ಸ್ವಾಮಿ, ಕಿರಣ ಮಹಾರಾಜ, ಗುಂಡಪ್ಪ ಹುಡಗೆ, ಕಾಶೀನಾಥ ಭಂಗೂರೆ, ಚಂದ್ರಶೇಖರರಡ್ಡಿ, ಮಹಾಂತೇಶ ಬಿರಾದಾರ್, ವಿರೂಪಾಕ್ಷ ದೇವರು, ಬಸವರಾಜ ಸ್ವಾಮಿ, ಚಂದ್ರಕಾಂತ ನೆಮತಾಬಾದ್, ಮಾಣಿಕೇಶ ಪಾಟೀಲ್, ರಾಜಕುಮಾರ ಕಾಡವಾದ, ಅರುಣ ಬಿರಾದಾರ್ ಇತರರಿದ್ದರು. ವೈಜಿನಾಥ ಪಾಟೀಲ್ ಸಿದ್ಧಾಪುರ ನಿರೂಪಣೆ ಮಾಡಿದರು. ಸುಭಾಷ ಬಿರಾದಾರ್ ವಂದಿಸಿದರು. ಕೋಕಿಲಾ ಮಹಾದೇವಪ್ಪ ಬಿರಾದಾರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net