ವಿಶ್ವಕರ್ಮ ಜನ ಶ್ರಮಜೀವಿಗಳು

vishwakarm jayanti
Published on

ಬೀದರ್: ವಿಶ್ವಕರ್ಮ ಸಮುದಾಯದ ಜನರು ಕಠಿಣ ಶ್ರಮಜೀವಿಗಳಾಗಿದ್ದು, ಕಾಯಕವೇ ಕೈಲಾಸ ತತ್ವದಂತೆ ದುಡಿಮೆಗೆ ಆದ್ಯತೆ ನೀಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊಡ್ಡ ಕಟ್ಟಡ, ದೇವಾಲಯ ಬುನಾದಿ ಹಾಕುವ ನೈಪುಣ್ಯ ಎಲ್ಲರಿಗೂ ಬರುವುದಿಲ್ಲ. ಅದೊಂದು ವಿಶೇಷ ಪ್ರತಿಭೆಯಾಗಿದೆ. ಪ್ರಸ್ತುತ ಬೃಹತ್ ಯಂತ್ರಗಳು ಬಂದರೂ ಇತಿಹಾಸದ ಮೂಲ ಸಂಸ್ಕೃತಿ ಮತ್ತು ಪರಂಪರೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ವಿಶ್ವಕರ್ಮ ಸಮಾಜದ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಕಾಂಗ್ರೆಸ್ ಸರ್ಕಾರ ಬಡವರು, ಹಿಂದುಳಿದವರು, ಶೋಷಿತ ತಳ ಸಮುದಾಯದವರ ಪರವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಡಿಸಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಪಾಂಚಾಳ, ಉಪಾಧ್ಯಕ್ಷ ಪಾಂಡುರಂಗ ಪಾಂಚಾಳ, ಕಾರ್ಯದರ್ಶಿ ಶಿವಾನಂದ ಸಿದ್ಧಾರೂಢ, ಚಂದ್ರಕಲಾ ವಿಶ್ವಕರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net